ಮಂಗಳೂರು,ಮೇ,16,2025 (www.justkannada.in): ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನ ಎನ್ ಐಎಗೆ ವಹಿಸುವಂತೆ ಬಿಜೆಪಿ ಆಗ್ರಹ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿಗರು ಎಲ್ಲವನ್ನೂ ಎನ್ ಐಎ, ಸಿಬಿಐ ಕೊಡಿ ಅಂತಾ ಜಪ ಮಾಡ್ತಾರೆ ಅಷ್ಟೆ. ಇದು ಬಿಜೆಪಿಯ ರಾಜಕೀಯ ದುರುದ್ದೇಶ ಎಂದು ಟೀಕಿಸಿದರು.
ನಮ್ಮ ಪೊಲೀಸರ ಮೇಲೆ ನಮಗೆ ವಿಶ್ವಾಸವಿದೆ. ಪಿಎಫ್ ಐ ಆಗಿರಲಿ ಯಾರೇ ಆಗಿರಲಿ ನಮ್ಮ ಪೊಲೀಸರು ಸಂಪೂರ್ಣ ತನಿಖೆ ಮಾಡುತ್ತಾರೆ. ನಮಗೆ ನಮ್ಮ ಜನರ ಸುರಕ್ಷತೆ ಮುಖ್ಯ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
Key words: BJP, Suhas Shetty, murder ,case, NIA, Minister, Dinesh Gundu Rao