ಬೆಂಗಳೂರು,ಮೇ,13,2025 (www.justkannada.in): ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆಯೇ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಭಾರತ- ಪಾಕ್ ನಡುವಿನ ಯಾವ ಆಧಾರದ ಮೇಲೆ ಕದನ ವಿರಾಮ ಒಪ್ಪಿಕೊಂಡಿರಿ ಎಂಬುದನ್ನ ಪ್ರಧಾನಿ ಮೋದಿ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ.
ಉಗ್ರರನ್ನು ನಾಶ ಮಾಡುತ್ತೇವೆ ಎಂದು ಮೋದಿ ಅವರು ಹೇಳಿದ್ದರು. ಹೀಗಾಗಿ ದೊಡ್ಡ ತೀರ್ಮಾನ ತೆಗದುಕೊಳ್ಳುವ ನಿರೀಕ್ಷೆ ಇತ್ತು , ಆದರೆ ಕದನ ವಿರಾಮ ಒಪ್ಪಿಕೊಂಡಿದ್ದಾರೆ. ಪ್ರಧಾನಿ ಮೋದಿ ರಾಜಕೀಯವಾಗಿ ಮಾತನಾಡುತ್ತಾರೆ, ಪಾಕಿಸ್ತಾನ ನಮ್ಮ ಮೇಲೂ ದಾಳಿ ಮಾಡಿದೆ. ಯಾವ ಆಧಾರದ ಮೇಲೆ ಕದನ ವಿರಾಮ ಒಪ್ಪಿಕೊಂಡರು ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
Key words: Clarify, ceasefire, accepted, Minister, Dinesh Gundu Rao