ಯುದ್ಧ ಯಾರಿಗೂ ಬೇಡ.ಆದ್ರೆ ಪಾಕ್ ಮತ್ತೆ ಯೋಚನೆ ಮಾಡದಂತೆ ಬುದ್ಧಿ ಕಲಿಸಬೇಕು- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಮೇ,9,2025 (www.justkannada.in):  ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೆ ಪಾಕಿಸ್ತಾನ ಭಾರತ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯುದ್ದದ ಕಾರ್ಮೋಡ ಕವಿದಿದೆ. ಈ ಕುರಿತು ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್ ಯುದ್ಧ ಯಾರಿಗೂ ಬೇಡ.ಆದ್ರೆ ಪಾಕ್ ಮತ್ತೆ ಯೋಚನೆ ಮಾಡದಂತೆ ಬುದ್ಧಿ ಕಲಿಸಬೇಕು ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ನಡೆಯುತ್ತಿದ್ದು, ಭಾರತೀಯ ಸೈನಿಕರಿಗೆ ಬೆಂಬಲ ಸೂಚಿಸಿ ಇಂದು ಕಾಂಗ್ರೆಸ್ ಪಕ್ಷಾತೀತವಾಗಿ ತಿರಂಗಾ ಯಾತ್ರೆ  ನಡೆಸುತ್ತಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದು, ಈ ವೇಳೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಯುದ್ಧ ಯಾರಿಗೂ ಬೇಡ. ಯುದ್ಧ ಆಗಬೇಕು ಅಂತ ಬಯಸುವುದು ಸರಿಯಲ್ಲ ಎಂದರು.

ಯುದ್ಧ ಆಗಬೇಕು ಅಂತ ಬಯಸುವುದು ಸರಿಯಲ್ಲ. ಆದರೆ ಪಾಕಿಸ್ತಾನ ಮಾತ್ರ ಪದೇ ಪದೇ ಭಾರತವನ್ನು ಕೆಣಕುತ್ತಿರುವುದು ಕಂಡುಬರುತ್ತದೆ. ಇವತ್ತು ಪಾಕಿಸ್ತಾನದ ವಿರುದ್ಧ ನಮ್ಮ ಸೇನೆ ಹೋರಾಡುತ್ತಿದೆ.  ಎಂದು ತಿಳಿಸಿದರು.

ಸೇನೆಗೆ ಬೆಂಬಲ ಸೂಚಿಸಲು ನಾವು ತಿರಂಗಾ ಯಾತ್ರೆ ಮಾಡುತ್ತಿದ್ದೇವೆ. ಸದ್ಯ ಭಾರತ ಪಾಕಿಸ್ತಾನದ ನಡುವೆ ಕದನ ಆಗುತ್ತಿದೆ. ಇದರಲ್ಲಿ ಭಾರತಕ್ಕೆ ಜಯ ಸಿಗಬೇಕು. ಭಾರತೀಯ ಸೇನೆಗೆ ನಾವೆಲ್ಲರೂ ಬೆಂಬಲ ಕೊಡಬೇಕು. ಯುದ್ಧ ಯಾರಿಗೂ ಬೇಡ. ಆದರೆ ಪಾಕಿಸ್ತಾನ ಮತ್ತೆ ಯೋಚನೆ ಮಾಡದಂತೆ ಬುದ್ಧಿ ಕಲಿಸಬೇಕು ಎಂದು ತಿಳಿಸಿದರು.

Key words: war, Indian, Pakistan, Minister,  Dinesh Gundu Rao