ಸರ್ಕಾರಿ ವೈದ್ಯರು ಮುಷ್ಕರ ಮಾಡಲ್ಲ ಎಂಬ ವಿಶ್ವಾಸವಿದೆ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಮಾರ್ಚ್,5,2026 (www.justkannada.in): ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ವೈದ್ಯರಯ ಮಾರ್ಚ್ 11 ರಂದು ಮುಷ್ಕರಕ್ಕೆ ಮುಂದಾಗಿದ್ದು ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್, ಸರ್ಕಾರಿ ವೈದ್ಯರು ಮುಷ್ಕರ ಮಾಡೋದು ಸರಿಯಲ್ಲ.  ಈಗಾಗಲೇ ಎರಡು ಬಾರು ಅವರ ಜೊತೆ ನಾವು ಸಭೆ ನಡೆಸಿದ್ದೇವೆ. ಶುಕ್ರವಾರ ಬಜೆಟ್ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಬ್ಯುಸಿ ಇದ್ದಾರೆ.  ಬಜೆಟ್ ಮುಗಿದ ಕೂಡಲೇ ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ವೈದ್ಯರು ಮುಷ್ಕರ ಮಾಡಲ್ಲ ಎಂಬ ವಿಶ್ವಾವಿದೆ ಎಂದರು.

ವೈದ್ಯರ ಮುಷ್ಕರದಿಂದ ಜನಸಾಮಾನ್ಯರಿಗೆ ರೋಗಿಗಳಿಗೆ ತೊಂದರೆ. ಬಹಳಷ್ಟು ತೊಂದರೆ ಆಗುತ್ತೆ ಎಂಬ ಮನವರಿಕೆ ಅವರಿಗೆ  ಇದೆ. ವೈದ್ಯರ ಜೊತೆ ಮತ್ತೆ ಸಭೆ ಮಾಡುತ್ತೇವೆ.  ಸಿಎಂ ಗಮನಕ್ಕೂ ತರುತ್ತೇವೆ ಸರ್ಕಾರಿ ಖರ್ಚಿನಲ್ಲೇ ಉನ್ನತ ವ್ಯಾಸಾಂಗದ ಬಗ್ಗೆ ಬೇಡಿಕೆ ಇಟ್ಟಿದ್ದಾರೆ. ವೈದ್ಯಾರಿಕಾರಿಗಳು ಬರೆದ ಪತ್ರ ನನ್ನ ಗಮನಕ್ಕೆ ಬಂದಿದೆ.  ಔಷಧಿ ಖರೀದಿ ಮಾಡಲ್ಲ ಎಂಬುದು ಒಳ್ಳೆಯ ಬೆಳೆವಣಿಗೆ ಅಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Key words:  confident, government, doctors, strike, Minister, Dinesh Gundu Rao