ಬೆಳಗಾವಿ,ಡಿಸೆಂಬರ್,15,2025 (www.justkannada.in): ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಆರೋಪ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಅಧಿಕಾರಿಗಳು ಸ್ಯಾಂಪಲ್ ಕಳಿಸಿದ್ದಾರೆ ವರದಿ ಬರಲಿ ಯಾವುದೇ ಆತಂಕ ಬೇಡ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗಾಗಿ ಗೊಂದಲ ಇದ್ದರೆ ನಾವು ತಿಳಿದುಕೊಳ್ಳಬೇಕಾಗುತ್ತದೆ. ಇಲಾಖೆ ಅಧಿಕಾರಿಗಳು ಈಗಾಗಲೇ ಸ್ಯಾಂಪಲ್ ಕಳಿಸಿದ್ದಾರೆ. ಎಗಾಸ್ ಕಂಪನಿಯ ಸ್ಯಾಂಪಲ್ ಗಳನ್ನು ತೆಗೆದುಕೊಂಡಿದ್ದಾರೆ. ವರದಿ ಬಂದ ನಂತರ ಈ ವಿಚಾರ ನಿಮ್ಮ ಮುಂದೆ ಇಡುತ್ತೇನೆ ಎಂದರು.
ಸೆಪ್ಟಂಬರ್ ಅಕ್ಟೋಬರ್ ನಲ್ಲಿ 125 ಮೊಟ್ಟೆಗಳ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. 123 ಮೊಟ್ಟೆಗಳ ಸ್ಯಾಂಪಲ್ ಉತ್ತಮ ಗುಣಮಟ್ಟವಿದೆ. ಒಂದೆರಡು ಮೊಟ್ಟೆ ಸ್ಯಾಂಪಲ್ ನಲ್ಲಿ ಸರಿಯಿರಲಿಲ್ಲ ಯಾವುದೋ ಸುದ್ದಿ ಕೇಳಿ ಆತಂಕ ಪಡುವುದು ಬೇಡ. ಮೊಟ್ಟ ಖರೀದಿ ಮಾಡುವುದೇ ಬೇಡ ಅನ್ನೋದು ಬೇಡ ಸಮಾಧಾನವಾಗಿ ಇರೋಣ ಿನ್ನೂ ರಿಪೋರ್ಟ್ ಬರಬೇಕು ಎಂದು ಸಚಿವ ದಿನೇಶ್ ಗುಂಡುರಾವ್ ಹೇಳಿದರು.
Key words: Cancer, eggs, report, Minister, Dinesh Gundu Rao







