ನನಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ- ಸಚಿವ ದಿನೇಶ್ ಗುಂಡೂರಾವ್

ಮೈಸೂರು,ಡಿಸೆಂಬರ್,5,2025 (www.justkannada.in);  ಪಕ್ಷದಲ್ಲಿ ಎಲ್ಲರಿಗೂ ಸಿಎಂ ಆಗಬೇಕು ಅನ್ನೋ ಆಸೆ ಇದೆ. ನನಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ. ಆದರೆ ಸಮಯ ಸಂದರ್ಭ ಡಿಸೈಟ್ ಮಾಡುತ್ತೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ನಾಯಕತ್ವ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಸಿಎಂ ಡಿಸಿಎಂ ಸೇರಿ ಎಲ್ಲರೂ ಹೈಕಮಾಂಡ್ ನಿರ್ಧಾರ ಬದ್ದ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರಿಗ ಕೂಡ ಸಿಎಂ ಆಗಬೇಕು ಎಂಬ ಆಸೆ ಇರುತ್ತದೆ. ಆದರೆ ಸಿಎಂ ಯಾರಾಗಬೇಕೆಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.

ನೀವು ಕೂಡ ಸಿಎಂ ರೇಸ್ ನಲ್ಲಿ ಇದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ನನ್ನ ಯಾಕೆ ಎಳೆದು ತರುತ್ತಿದ್ದೀರಾ?  ನನಗೆ ಆಸೆ ಇದೆ ಆದ್ರೆ ಸಮಯ ಸಂಧರ್ಭ ಎಲ್ಲವನ್ನೂ ಕೂಡ ಡಿಸೈಡ್ ಮಾಡತ್ತೆ. ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನವೇ ಅಂತಿಮ ಹೈ ಕಮಾಂಡ್ ಏನು ತೀರ್ಮಾನ ಮಾಡುತ್ತೋ ನೋಡೋಣ ಎಂದರು.

ವಿಪಕ್ಷ ಬಿಜೆಪಿ ಸಂಪೂರ್ಣ ನಿಷ್ಕ್ರಿಯವಾಗಿದೆ. ಕೇವಲ ಭಾಷಣ ಬಿಗಿಯುವುದರಲ್ಲಿ ವಿಜಯೇಂದ್ರ ಅಶೋಕ್, ಪ್ರಹ್ಲಾದ್ ಜೋಶಿ ಬ್ಯುಸಿ ಇದ್ದಾರೆ. ರೈತರ ಸಮಸ್ಯೆಗಳನ್ನು ಕೇಂದ್ರಕ್ಕೆ ತಲುಪಿಸುತ್ತಿಲ್ಲ. ಕೇಂದ್ರದಲ್ಲಿ ಸಂಸದರು ದ್ವನಿ ಎತ್ತುತ್ತಿಲ್ಲ. ಇವರಿಗೇನು ಜವಾಬ್ದಾರಿ ಇಲ್ವಾ? ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ ಬಿಜೆಪಿ ಇದ್ದಾಗ ಜಗದೀಶ್ ಶೆಟ್ಟರ್ ಸದಾನಂದ ಗೌಡ ಎಲ್ಲರೂ ಸಿಎಂ ಆದರು . ಅವರ ರೀತಿಯ ಕಿತ್ತಾಟ ಗೊಂದಲ ನಮ್ಮಲ್ಲಿ ಇಲ್ಲ. ನಿನ್ನೆ ಸಭೆಯಲ್ಲೂ ಕೂಡ ಎಲ್ಲರೂ ಒಟ್ಟಾಗಿ ಭಾಗಿಯಾಗಿದ್ದೇವೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

Key words: I also, want, become, CM, Minister, Dinesh Gundu Rao