Friday, August 14, 2026

BDA Apartments

Home Front Page ಸಚಿವ ಡಿ.ಸುಧಾಕರ್ ಪಂಚಭೂತಗಳಲ್ಲಿ ಲೀನ: ಅಂತ್ಯಕ್ರಿಯೆಯಲ್ಲಿ ಸಿಎಂ,ಡಿಸಿಎಂ ಭಾಗಿ

ಸಚಿವ ಡಿ.ಸುಧಾಕರ್ ಪಂಚಭೂತಗಳಲ್ಲಿ ಲೀನ: ಅಂತ್ಯಕ್ರಿಯೆಯಲ್ಲಿ ಸಿಎಂ,ಡಿಸಿಎಂ ಭಾಗಿ

ಚಿತ್ರದುರ್ಗ,ಮೇ,11,2026 (www.justkannada.in):  ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ನಿಧನರಾದ  ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಚಿತ್ರದುರ್ಗ ಜಿಲ್ಲೆ ಚಳ್ಳೆಕೆರೆಯ ಜೈನ್ ಚಿತಾಗಾರದಲ್ಲಿ ಜೈನ್ ಸಂಪ್ರದಾಯದಂತೆ ಸಚಿವ ಡಿ.ಸುಧಾಕರ್ ಅವರ ಅಂತ್ಯಕ್ರಿಯೆ ನೆರವೇರಿತು. ಇದಕ್ಕೂ ಮುನ್ನ ಪೊಲೀಸ್ ಗೌರವ ವಂದನೆ ಸಲ್ಲಿಸಲಾಯಿತು. ನಂತರ ಅಂತಿಮ ವಿಧಿ ವಿಧಾನ ನೆರವೇರಿಸಿಲಾಯಿತು.  ಡಿ.ಸುಧಾಕರ್ ಚಿತೆಗೆ ಪುತ್ರ ಸುಹಾಸ್  ಅಗ್ನಿಸ್ಪರ್ಶ ಮಾಡಿದರು.

ಸುಧಾಕರ್ ಅವರ ಅಂತ್ಯಕ್ರಿಯೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜಕೀಯ ಮುಖಂಡರು ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

Key words: Minister, D. Sudhakar, Funeral, CM, DCM