ರಾಜ್ಯಗಳಿಗೆ ನೀಡುವ NDRF ಪರಿಹಾರ ಪರಿಷ್ಕರಣೆಗೆ ಕೇಂದ್ರಕ್ಕೆ ಒತ್ತಡ ಹಾಕಿ- ಸಚಿವ ಚಲುವರಾಯಸ್ವಾಮಿ

ಬೆಂಗಳೂರು, ಮಾರ್ಚ್,24,2026 (www.justkannada.in):  ಸಂಕಷ್ಟದ  ವೇಳೆ ರಾಜ್ಯಗಳಿಗೆ ಕೇಂದ್ರ ಸರ್ಕಾರವು  ನೀಡುವ ಎನ್‌ಡಿಆರ್‌ಎಫ್‌ ಪರಿಹಾರ ಪರಿಷ್ಕರಣೆ ಮಾಡಲು ಬಿಜೆಪಿ ಸಂಸದರು ಒತ್ತಡ  ಹೇರಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದರು.

ವಿಧಾನ ಪರಿಷತ್‌ನಲ್ಲಿ  ಸದಸ್ಯ ಚಿದಾನಂದಗೌಡ ಅವರು ಈ ವಿಚಾರ ಪ್ರಸ್ತಾಪಿಸಿ ತುಮಕೂರು ಭಾಗದಲ್ಲಿ ಬೆಳೆಹಾನಿ ಮತ್ತು ಬರಪೀಡಿತ ಪ್ರದೇಶಗಳಿಗೆ ಎನ್‌ ಡಿಆರ್‌ಎಫ್‌ ನಡಿ ನೀಡುತ್ತಿರುವ ಪರಿಹಾರ  ಸಾಲುತ್ತಿಲ್ಲ ಹೀಗಾಗಿ ರಾಜ್ಯಸರ್ಕಾರ ಇದನ್ನು ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದರು.

ಈ ವೇಳೆ ಉತ್ತರಿಸಿದ ಸಚಿವ ಚಲುವರಾಯಸ್ವಾಮಿ,  ಈ ಹಿಂದೆಯೂ ಎನ್‌ಡಿಆರ್‌ಎಫ್‌ ಪರಿಷ್ಕರಣೆ ಮಾಡಬೇಕೆಂದು ನಮ್ಮ ಸಚಿವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಜತೆಗೆ ಸಂಬಂಧಪಟ್ಟ ಸಚಿವರು ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸದನದಲ್ಲಿರುವ ಸದಸ್ಯರು ಪ್ರಧಾನಿ ಮೋದಿ ಅವರಿಗೆ ಎನ್‌ ಡಿಆರ್‌ಎಫ್‌ ಪರಿಹಾರ ನಿಧಿಯನ್ನು ಪರಿಷ್ಕರಣೆ ಮಾಡಬೇಕೆಂದು ಒತ್ತಡ ಹಾಕಬೇಕು ಎಂದು ತಿಳಿಸಿದರು.

Key words: Centre, revise, NDRF,  Minister, Chaluvarayaswamy