CLP ಸಭೆಯಲ್ಲಿ ಯಾರು ಗ್ಯಾರಂಟಿ ವಿರೋಧಿಸಿಲ್ಲ- ಸಚಿವ ಚಲುವರಾಯಸ್ವಾಮಿ

ಬೆಳಗಾವಿ,ಡಿಸೆಂಬರ್,10,2025 (www.justkannada.in): ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರೂ ಕೂಡ ಗ್ಯಾರಂಟಿ ಯೋಜನೆಗಳನ್ನ ವಿರೋಧಿಸಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ಯೋಜನೆಗಳನ್ನ ವಿರೋಧಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಕುರಿತು ಮಾತನಾಡಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಸಿಎಲ್ ಪಿ ಸಭೆಯಲ್ಲಿ ಯಾರು ಗ್ಯಾರಾಂಟಿ ವಿರೋಧಿಸಿಲ್ಲ. ಅನವಶ್ಯಕವಾಗಿ ಯಾರಿಗೂ  ಗ್ಯಾರಂಟಿ ನೀಡಬಾರದೆಂಬ ಚರ್ಚೆಯಾಗಿದೆ. ಅದರೆ ಗ್ಯಾರಂಟಿ  ಯೋಜನೆಗಳಿಗೆ ಶಾಸಕರು ವಿರೋಧ ವ್ಯಕ್ತಪಡಿಸಿಲ್ಲ. ಜನರಿಗೆ ಗ್ಯಾರಂಟಿ ಬಗ್ಗೆ ತಿಳಿಸದಿದ್ರೆ ಪ್ರಯೋಜನ ಆಗಲ್ಲ. ಇನ್ನೂ ಜಿಲ್ಲೆಗಳಿಗೆ ನಾವು ಭೇಟಿ ಕೊಟ್ಟಾಗ ಗ್ಯಾರಂಟಿಗಳ ಬಗ್ಗೆ ಮಾತನಾಡಬೇಕೆಂದು ಸಭೆಯಲ್ಲಿ ಕೆಲವರು ಸೂಚಿಸಿದ್ದಾರೆ ಎಂದು  ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

Key words: No one, opposed, guarantee, CLP meeting, Minister, Chaluvarayaswamy