ಮದ್ದೂರು ಗಲಭೆ ತನಿಖೆಗೆ ಸಿಎಂ, ಗೃಹ ಸಚಿವರು ಸೂಚನೆ- ಸಚಿವ ಚಲುವರಾಯಸ್ವಾಮಿ

ಚಿಕ್ಕಮಗಳೂರು,ಸೆಪ್ಟಂಬರ್,10,2025 (www.justkannada.in):  ಮದ್ದೂರಿನಲ್ಲಿ ನಡೆದ ಗಲಭೆ ಕುರಿತು ತನಿಖೆ ನಡೆಸಲು ಸಿಎಂ ಮತ್ತು ಗೃಹ ಸಚಿವರು ಸೂಚಿಸಿದ್ದಾರೆ. ನಾನು ಕೂಡ ಹೆಚ್ಚಿನ ತನಿಖೆಗೆ ಆದೇಶಿಸಿದ್ದೇನೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ,  ಕಲ್ಲು ತೂರಾಟ ಮಾಡಿದ ಮುಸ್ಲೀಮರ ಮೇಲೆ ಎಫ್ ಐಆರ್ ದಾಖಲಾಗಿದೆ. ಈವರೆಗೂ ಯಾವುದೇ ಹಿಂದೂಗಳ ಮೇಲೆ ಎಫ್ ಐಆರ್ ದಾಖಲಾಗಿಲ್ಲ. ಸಿಎಂ ಗೃಹ ಸಚಿವರು ತನಿಖೆಗೆ ಸೂಚನೆ ನೀಡಿದ್ದಾರೆ. ನಾನು ಕೂಡ ಹೆಚ್ಚಿನ ತನಿಖೆ ನಡೆಸಲು ಆದೇಶ ಮಾಡಿದ್ದೇವೆ.

ಈ ಪ್ರಕರಣದಲ್ಲಿ ಹಿಂದೂ ಮುಸ್ಲೀಮರು ಅಂತ ನಾವು ನೋಡಲ್ಲ. ಯಾರೇ ತಪ್ಪು ಮಾಡಿದರೂ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.

Key words:  CM, Home Minister , investigate, Maddur riots, Minister Chaluvarayaswamy