ಮಂಡ್ಯ,ಸೆಪ್ಟಂಬರ್,8,2025 (www.justkannada.in): ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಮಂಧಿಯನ್ನ ಬಂಧಿಸಲಾಗಿದೆ. ಬಂಧನ ಮಾಡಿದ್ದರೂ ಬಿಜೆಪಿ , ಜೆಡಿಎಸ್ ನವರು ಯಾಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದರು.
ಇಂದು ಮಾಧ್ಯಮಗಳ ಜೊತೆ ಮಾತನಡಿದ ಸಚಿವ ಚಲುವರಾಯಸ್ವಾಮಿ, ಕಲ್ಲೂ ತೂರಾಟ ಪೂರ್ವ ನಿಯೋಜಿತ ಸಂಚು . ಮಸೀದಿ ಕಡೆಯಿಂದ ಕಲ್ಲುಗಳು ಎಸೆದಿರುವ ಬಗ್ಗೆ ಮಾಹಿತಿ ಇದೆ. ವಿಚಾರಣೆ ಬಳಿಕ ಪ್ರಕರಣ ಸಂಬಂಧ 21 ಜನರನ್ನ ಬಂಧಿಸಿಲಾಗಿದೆ. ಯಾವ ಹಿಂದೂಗಳ ಮೇಲೂ ಪ್ರಕರಣ ದಾಖಲಾಗಿಲ್ಲ ಇಷ್ಟು ಬೇಗ ಕ್ರಮ ತೆಗೆದುಕೊಂಡ ಪ್ರಕರಣ ಬೇರೆ ಯಾವುದು ಇಲ್ಲ ಎಂದರು.
ಬಿಜೆಪಿ ಜೆಡಿಎಸ್ ನವರು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಇನ್ನಷ್ಟು ಬಿಗಿ ಕ್ರಮಗಳನ್ನ ತೆಗೆದುಕೊಳ್ಳುವಂತೆ ಹೇಳಬಹುದಿತ್ತು ಅದನ್ನ ಬಿಟ್ಟು ಕೋಮು ಗಲಭೆಗೆ ಮುಂದಾಗಿರುವುದು ಸರಿಯಲ್ಲ. ಆರೋಪಿಗಳ ಬಂಧಿಸಿದ ಮೇಲೂ ಪ್ರತಿಭಟನೆ ಯಾಕೆ ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.
Key words: 21 people, arrested, stone pelting, Minister, Chaluvarayaswamy