ಎಲ್ಲಾ ರಾಜ್ಯಗಳಲ್ಲೂ ರಸಗೊಬ್ಬರ ಸರಬರಾಜು ಕಡಿಮೆ: ಇದಕ್ಕೆ ಕೇಂದ್ರವೇ ಕಾರಣ-ಸಚಿವ ಚಲುವರಾಯಸ್ವಾಮಿ

ಮಂಡ್ಯ,ಆಗಸ್ಟ್,15,2025 (www.justkannada.in): ರಾಜ್ಯದಲ್ಲಿ ರಸಗೊಬ್ಬರ ಸರಬರಾಜು ಕಡಿಮೆ ಆಗಿರೋದು ಸತ್ಯ. ಎಲ್ಲಾ ರಾಜ್ಯಗಳಲ್ಲೂ ರಸಗೊಬ್ಬರ ಸರಬರಾಜು ಕಡಿಮೆ ಆಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ,  ನಿನ್ನೆ ಶಿವರಾಜ್ ಸಿಂಗ್ ವಿಡಿಯೋ ಕಾನ್ಪರೆನ್ಸ್ ಮಾಡಿದ್ದರು. ಎಲ್ಲಾ ರಾಜ್ಯಗಳಿಗೂ ರಸಗೊಬ್ಬರ ಸರಬರಾಜು ಕಡಿಮೆ ಆಗಿದೆ ಇದಕ್ಕೆ ಕೇಂದ್ರ ಸರ್ಕಾರ ನೇರ ಕಾರಣವಾಗಿದ್ದರೆ ಇತ್ತ ಬಿಜೆಪಿಯವರು ಇದನ್ನು ರಾಜಕೀಯವಾಗಿ ಬಳಕೆ ಮಾಡುತ್ತಿದ್ದಾರೆ. ಮುಂಗಾರು ಬೇಗ ಆರಂಭವಾಗಿದ್ದರಿಂದ ರಸಗೊಬ್ಬರ ಕೊರತೆ ಇದೆ.  ಕೇಂದ್ರ ಸರ್ಕಾರಕ್ಕೆ ಈಗಾಗಲೇ ನಾವು ಮನವರಿಕೆ ಮಾಡಿದ್ದೇವೆ ಎಂದು ತಿಳಿಸಿದರು.

ಕೆಎನ್ ರಾಜಣ್ಣಅವರ ಸ್ಥಾನ ಯಾರಿಗೆ ಕೊಡುತ್ತಾರೋ ಗೊತ್ತಿಲ್ಲ.   ಮಂಡ್ಯ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿ.  ಪಿಎಂ ನರೇಂದ್ರ ಸ್ವಾಮಿ ಸಚಿವರಾಗಬೇಕು ಎಂದು ಕೇಳಿದ್ದೇವೆ.  ಪಿಎಂ ನರೇಂದ್ರ ಸ್ವಾಮಿಗೆ ಸಚಿವ ಸ್ಥಾನ ಸಿಗಬೇಕು ಎಂದು ಆಸೆ ಇದೆ. ಹೈಕಮಾಂಡ್ ಯಾರಿಗೆ ಎಂದು ತೀರ್ಮಾನ ಮಾಡಲಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

Key words: Fertilizer, supply , low , Minister, Chaluvarayaswamy