ಬೆಂಗಳೂರು,ಜುಲೈ,30,2025 (www.justkannada.in): ರಸಗೊಬ್ಬರವನ್ನ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವಿಪಕ್ಷದವರು ಆರೋಪ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಯಾವುದೇ ಸಾಕ್ಷಿ ನೀಡಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ನಾನು ನಿರಂತರವಾಗಿ ಜಿಲ್ಲಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ ಸಿಎಂ ಸಿದ್ದರಾಮಯ್ಯ ಸಹ ಡಿಸಿಗಳ ಜೊತೆ ಮಾತನಾಡಿದ್ದಾರೆ. ಟೀಕೆಗೆ ಉತ್ತರ ಕೊಡುವುದಕ್ಕೂ ಮುನ್ನ ರೈತರ ಸಮಸ್ಯೆ ಬಗೆಹರಿಬೇಕು ಎಂದರು.
ಆರ್ ಅಶೋಕ್, ವಿಜಯೇಂದ್ರ, ಬೊಮ್ಮಾಯಿ ಮಾತು ಕೇಳಿದ್ದೇನೆ. ಅಶೋಕ್ ಗೆ ಎಷ್ಟರ ಮಟ್ಟಿಗೆ ಬುದ್ದಿ ಇದೆಯೋ ಗೊತ್ತಿಲ್ಲ. ಗೊತ್ತಿದ್ದೂ ಮಾತಾಡುತ್ತಾರೋ ಗೊತ್ತಿಲ್ಲದೇ ಮಾತಾಡ್ತಾರೋ ಗೊತ್ತಿಲ್ಲ. ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ. ರೈತರ ಪರವಾಗಿ ಹೋರಾಟ ಮಾಡಿ ರಾಜಕೀಯ ಮಾಡಬೇಡಿ 2 ವರ್ಷದಿಂದ ನಮಗೆ ಕೇಂದ್ರದಿಂದ ಅನ್ಯಾಯವಾಗಿದೆ. ಕೃಷಿ ರಸಗೊಬ್ಬರ ಬಗ್ಗೆ ಅಷ್ಟೆ ನಾನು ಮಾತನಾಡುತ್ತೇನೆ. ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಯಾವುದೇ ಸಾಕ್ಷಿ ನೀಡಿಲ್ಲ. ವಿರೋಧ ಪಕ್ಷದವರು ಹೇಳಿಕೆ ಕೊಡುತ್ತಿರುವುದರಿಂದ ಸಮಸ್ಯೆ ಆಗುತ್ತಿದೆ ಎಂದು ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
Key words: fertilizer, shortage, Minister, Chaluvarayaswamy