ರಸಗೊಬ್ಬರ ಕೊರತೆ: ಬಿಜೆಪಿಗೆ ಧಮ್, ತಾಕತ್ತಿದ್ದರೇ ಕೇಂದ್ರದ ಮೇಲೆ ಒತ್ತಡ ಹಾಕಲಿ- ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಜುಲೈ,28,2025 (www.justkannada.in): ಬಿಜೆಪಿಗೆ ಧಮ್, ತಾಕತ್ತಿದ್ದರೇ ರಾಜ್ಯಕ್ಕೆ  ರಸಗೊಬ್ಬರ ಪೂರೈಸಲು ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ  ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ರಸಗೊಬ್ಬರ ಸಿಗದೆ ರೈತರ ಪರದಾಟ ಹಿನ್ನೆಲೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಈ ಬಗ್ಗೆ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ರಾಜ್ಯದ  ಡಿಸಿಗಳು ಕಾರ್ಯದರ್ಶಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ.  ಕೇಂದ್ರ ಸರ್ಕಾರವೇ ನಮಗೆ ಯೂರಿಯಾ ಒದಗಿಸುತ್ತದೆ ಹೀಗಾಗಿ ನಾವು ಇದರಲ್ಲಿ ರಾಜಕೀಯ ಮಾಡಲು ಹೋಗಿರಲಿಲ್ಲ. ಬಿಜೆಪಿಗರು ರಾಜಕೀಯವಾಗಿ ಮಾತಾಡಿದರೆ ಏನು ಮಾಡಲು ಆಗಲ್ಲ ಬಿಜೆಯವರಿಗೆ ಕೇಂದ್ರದ ಬಳಿ ಹೋಗಿ ಹೇಳುವ ಧಮ್ ಇಲ್ಲ ಎಂದು ಕುಟಕಿದರು.

ರೈತರಿಗೆ ರಸಗೊಬ್ಬರ ಕೊಡುತ್ತಿದ್ದೇವೆ  ಕೊಪ್ಪಳದಲ್ಲೂ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ.  ರೈತರ ಸಮಸ್ಯೆಗಳ ಮೇಲೆಯೂ ರಾಜಕಾರಣ ಮಾಡುತ್ತಾರೆ ಇದಕ್ಕೆ ಏನು ಮಾಡಲು ಆಗಲ್ಲ. ರೈತರ ಪರ ನಾವು ಇದ್ದೇವೆ.  ಕೇಂದ್ರದಿಂದ ಬರಬೇಕಾದ ಬಾಕಿ ಯೂರಿಯಾಕ್ಕಾಗಿ ಪ್ರಯತ್ನ ಮಾಡುತ್ತಿದ್ದೇವೆ.  ಬಿಜೆಪಿಗೆ ಧಮ್ ತಾಕತ್ತಿದ್ದರೆ ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಚಾಲೆಂಜ್ ಮಾಡಿದರು.vtu

Key words: Fertilizer, shortage, BJP, Central Government, Minister, Chaluvarayaswamy