ಡಿಕೆಶಿ ಸಿಎಂ ಕುರಿತು ರಂಭಾಪುರಿ ಶ್ರೀ ಹೇಳಿಕೆ: ಅದು ಅವರ ಅಭಿಪ್ರಾಯ ಎಂದ ಸಚಿವ ಚಲುವರಾಯಸ್ವಾಮಿ

ನವದೆಹಲಿ,ಜುಲೈ,7,2025 (www.justkannada.in):  ಡಿಕೆ ಶಿವಕುಮಾರ್ ಸಿಎಂ ಆಗಲಿ. ಅವರಿಗೆ ಅವಕಾಶ ಕೊಟ್ಟರೇ ಶ್ರಮಕ್ಕೆ ಸಾರ್ಥಕ ದೊರೆತಂತಾಗುತ್ತದೆ  ಎಂದು ರಂಭಾಪುರಿ ಶ್ರೀಗಳು ಹೇಳಿಕೆ  ನೀಡಿರುವ ಕುರಿತು ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ರಂಭಾಪುರಿ ಶ್ರೀಗಳ ಹೇಳಿಕೆ ಅವರ ಅಭಿಪ್ರಾಯ ಅಷ್ಟೆ.  ಬಹಳ ಹಿಂದಿನಿಂದಲೂ ಬಹಳಷ್ಟು ಜನ ಅಭಿಪ್ರಾಯ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಬಹಳ ಅನ್ಯೂನ್ಯವಾಗಿದ್ದಾರೆ ಇಬ್ಬರೂ ಕಷ್ಟಪಟ್ಟು  ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.

ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಬೇಕು ಅಂತಾ ಜನಪರ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ರಂಭಾಪುರಿ ಶ್ರೀಗಳ  ಹೇಳಿಕೆ ಅವರ ಅಭಿಪ್ರಾಯ ಅಷ್ಟೆ ಇದನ್ನು ಹೆಚ್ಚು ಚರ್ಚಿಸುವ ಅಗತ್ಯವಿಲ್ಲ ಎಂದು  ಚಲುವರಾಯಸ್ವಾಮಿ ತಿಳಿಸಿದರು.vtu

Key words: Rambhapuri Shri,  statement, Minister, Chaluvarayaswamy