Sunday, August 2, 2026

BDA Apartments

Home Front Page ಮುಡಾ ಹಗರಣ: ನಾನು ಬಹಳ ಕ್ಲಿಯರ್ ಆಗಿದ್ದೇನೆ ನಮ್ಮ ಪಾತ್ರ ಇಲ್ಲ- ಸಚಿವ ಭೈರತಿ ಸುರೇಶ್

ಮುಡಾ ಹಗರಣ: ನಾನು ಬಹಳ ಕ್ಲಿಯರ್ ಆಗಿದ್ದೇನೆ ನಮ್ಮ ಪಾತ್ರ ಇಲ್ಲ- ಸಚಿವ ಭೈರತಿ ಸುರೇಶ್

ಬೆಂಗಳೂರು,ಜನವರಿ,28,2025 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿರುವ ನೋಟಿಸ್ ಗೆ ಹೈಕೋರ್ಟ್  ತಡೆಯಾಜ್ಞೆ ನೀಡಿರುವ ವಿಚಾರ ಕುರಿತು ಸಚಿವ ಭೈರತಿ ಸುರೇಶ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಭೈರತಿ ಸುರೇಶ್, ಪ್ರಕರಣದಲ್ಲಿ ನನ್ನದಾಗಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರದ್ದಾಗಲಿ ತಪ್ಪಿಲ್ಲ, ನಮ್ಮ ಪಾತ್ರವಿಲ್ಲ ಎಂದು ಹೈಕೋರ್ಟ್ ತಡೆ ನೀಡಿದೆ. ನಿನ್ನೆ ನ್ಯಾಯಮೂರ್ತಿಗಳು ಕೇಸ್ ಮುಂದೂಡಿದ್ದಾರೆ.  ನ್ಯಾಯಾಲಯ ಸಂವಿಧಾನದ ಮೇಲೆ ನಂಬಿಕೆ ಇದೆ ಎಂದರು.

ನಾನು ಬಹಳ ಕ್ಲಿಯರ್ ಆಗಿದ್ದೇನೆ ನಮ್ಮ ಪಾತ್ರ ಇಲ್ಲ. ಹಗರಣ ನಡೆದಾಗ ನಾನು ಸಚಿವನಲ್ಲ, ಸೈಟ್ ಪಡೆದಿಲ್ಲ ಸೈಟ್ ಹಂಚಿಕೆ ಗೋಂದಲ ಬಳಿಕ ಸೈಟ್ ವಾಪಸ್ ನೀಡಿದ್ದಾರೆ. ನನಗೆ ನೋಟಿಸ್ ಬಂದಾಗ ಶಾಕ್ ಆಯ್ತು.  ಹಗರಣ ನಡೆದಾಗ ನಾನೂ ಮಂತ್ರಿನೂ ಅಲ್ಲ.  ನೋಟಿಸ್ ನೀಡಿರುವ ಬಗ್ಗೆ ಇಡಿಯವರನ್ನೇ ಕೇಳಬೇಕು. ನನಗೆ ಕೊಟ್ಟಿರುವುದು ಒಂದೇ ನೋಟಿಸ್.  ಸಿಎಂ ಪತ್ನಿಗೆ 2ನೇ ನೋಟಿಸ್ ಕೊಟ್ಟಿದ್ದಾರಾ ಗೊತ್ತಿಲ್ಲ ಎಂದು ಭೈರತಿ ಸುರೇಶ್ ತಿಳಿಸಿದರು.

Key words: Muda scam, clear, no role, Minister, Bhairati Suresh