ಕೋಲಾರ, ಅಕ್ಟೋಬರ್,29,2025 (www.justkannada.in): ಸಿಎಂ ರೇಸ್ ಸಚಿವ ಕೆ.ಎಚ್ ಮುನಿಯಪ್ಪ ವಿಚಾರ ಕುರಿತು ಪ್ರತಿಕ್ರಿಯಿಸಿರುವ ನಗರಾಭಿವೃದ್ದಿ ಇಲಾಖೆ ಸಚಿವ ಭೈರತಿ ಸುರೇಶ್, ಕೆಎಚ್ ಮುನಿಯಪ್ಪ ಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪೇನು..? ಎಂದು ಪ್ರಶ್ನಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಭೈರತಿ ಸುರೇಶ್, ಮುನಿಯಪ್ಪ ನಮ್ಮ ನಾಯಕರು, 7 ಬಾರಿ ಸಂಸದರಾಗಿದ್ದಾರೆ. ಈಗ ಸಚಿವರು ಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪೇನು? ಸಿದ್ದರಾಮಯ್ಯರನ್ನ ತೆಗೆದು ನಮಗೆ ಕೊಡಿ ಎಂದು ಕೇಳುತ್ತಿಲ್ಲ . ಆ ಸಂದರ್ಭ ಬಂದರೆ ಅವಕಾಶ ಕೊಡಿ ಎನ್ನುತ್ತಿದ್ದಾರೆ ಎಂದರು.
ಸಂಫುಟ ಪುನಾರಚನೆ ಕುರಿತು ಪ್ರತಿಕ್ರಿಯಿಸಿದ ಸಚಿವ ಭೈರತಿ ಸುರೇಶ್, ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಬದ್ದ. ಸಿದ್ದರಾಮಯ್ಯ ಮುಂದುವರೆಯುವ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ದಲಿತ ಸಿಎಂ ವಿಚಾರ, ಜಾತಿ ಜನಾಂಗದ ಪರ ಕೇಳುವ ಹಕ್ಕು ಎಲ್ಲರಿಗೂ ಇದೆ ಸಂಪುಟ ಪುನಾರಚನೆ, ನಾಯಕತ್ಬ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋದರೆ ತಪ್ಪೇನಿದೆ ವೈಯಕ್ತಿಕ ಕೆಲಸಗಳಿಗೆ ಹೋಗಿರುತ್ತಾರೆ ಅಧಿಕಾರ ಹಂಚಿಕೆ ಬಗ್ಗೆ ನಮ್ಮ ಮಟ್ಟದಲ್ಲಿ ಚರ್ಚೆ ನಡೆಯಲ್ಲ ಎಂದರು.
Key words: KH Muniyappa, CM post, Minister, Bhairati Suresh







