ಮನೆಗೆ ಮುತ್ತಿಗೆ ಹಾಕಿದ ಎನ್ ಎಸ್ ಯುಐ ಕಾರ್ಯಕರ್ತರ ಸಮರ್ಥನೆ: ಸಿದ್ಧರಾಮಯ್ಯ ವಿರುದ್ಧ ಸಚಿವ ಬಿಸಿ ನಾಗೇಶ್ ಆಕ್ರೋಶ.

ಬೆಂಗಳೂರು,ಜೂನ್,3,2022(www.justkannada.in): ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಬಂಧಿತರಾದ ಎನ್ ಎಸ್ ಯುಐ ಕಾರ್ಯಕರ್ತರನ್ನ ಸಮರ್ಥಿಸಿಕೊಂಡ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ಸಚಿವ.ಬಿ.ಸಿ ನಾಗೇಶ್, ಮನೆಯ ಮೇಲೆ ದಾಳಿ ಮಾಡಲು ಹೊರಗಿನಿಂದ ಬಂದಿದ್ದರು. ಮೊದಲೇ ತಿಪಟೂರಿಗೆ ಬಂದ ಬಗ್ಗೆ ಮಾಹಿತಿ ಇದೆ. ನಾನು ಇಲ್ಲದಿದ್ದಾಗ ಮನೆಗೆ ನುಗ್ಗೋದು ಎಷ್ಟು ಸರಿ. ಸಿದ್ಧರಾಮಯ್ಯ ಇದನ್ನ ಸಮರ್ಥಿಸಿಕೊಳ್ಳೋದು ಎಷ್ಟು ಸರಿ ಎಂದು ಕಿಡಿಕಾರಿದರು.

ಇನ್ನು ಮುಂದೇ ಹಿಂದೂ ಧರ್ಮದ ಬಗ್ಗೆ ಬೋಧನೆ ಮಾಡಲಿದ್ದಾರೆ.

ಪಠ್ಯ ಪರಿಷ್ಕರಣೆ ಕುರಿತು ಇಂದು ವರದಿ ನೀಡುವೆ. ಇಷ್ಟು ದಿನ ಬೇರೆ ಧರ್ಮದ ವಿಚಾರ ಬೋಧನೆ ಮಾಡುತ್ತಿದ್ದರು. ಇನ್ನು ಮುಂದೇ ಹಿಂದೂ ಧರ್ಮದ ಬಗ್ಗೆ ಬೋಧನೆ ಮಾಡಲಿದ್ದಾರೆ. ಇದು ವಿಪಕ್ಷಗಳಿಗೆ ಸಹಿಸಲು ಆಗಲ್ಲ.  ಸಿಎಂಗೆ ಎಲ್ಲದರ ಬಗ್ಗೆ ವರದಿ ನೀಡುವೆ ಎಂದರು.

ಇನ್ನು ತಮ್ಮ ಪಠ್ಯವನ್ನ ಕೈಬಿಡುವಂತೆ ಮನವಿ ಮಾಡಿ ಸಾಹಿತಿ ದೇವನೂರ ಮಹದೇವ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ. ಬಿ.ಸಿ ನಾಗೇಶ್, ದೇವನೂರ ಮಹದೇವ ಅವರ ಪತ್ರ ಮೇ 29ಕ್ಕೆ ಬಂದು ಸೇರಿದೆ ಅಂದೇ ಅವರಿಗೆ ಪತ್ರ ಬರೆದಿದ್ದೇನೆ. ನಿಮ್ಮಂತವರ ಪಠ್ಯ ಮಕ್ಕಳು ಕಲಿಯಬೇಕು ಎಂದಿದ್ದೇನೆ ಎಂದರು.

Key words: minister-BC Nagesh-outrage-former CM-Siddaramaiah