ನನ್ನ ಮಾತಿನ ಹಿಂದೆ ಯಾವುದೇ ದುರುದ್ಧೇಶ ಇಲ್ಲ- ಸಿದ್ಧರಾಮಯ್ಯ ವಿರುದ್ಧ ವಿವಾದದ ಮಾತಿಗೆ ಸಚಿವ ಅಶ್ವಥ್ ನಾರಾಯಣ್ ವಿಷಾದ.

ಬೆಂಗಳೂರು,ಫೆಬ್ರವರಿ,16,2023(www.justkannada.in): ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನ ಹೊಡೆದು ಹಾಕೋಣ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಇದೀಗ ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಅಶ್ವಥ್ ನಾರಾಯಣ್, ನನ್ನ ಮಾತಿನ ಹಿಂದೆ ಯಾವುದೇ ದುರುದ್ಧೇಶ ಇಲ್ಲ.ಮಂಡ್ಯದಲ್ಲಿ ಟಿಪ್ಪುಗೆ ಸಿದ್ಧರಾಮಯ್ಯ ಹೋಲಿಸಿ ಆಡಿರುವ ಮಾತು  ಸಾಂಧರ್ಭಿಕ ಪ್ರಸ್ತಾಪವೇ ಹೊರೆತು ದುರುದ್ದೇಶವಲ್ಲ.  ರಾಜಕೀಯದಲ್ಲಿ  ವಾಗ್ದಾಳಿ ಅವಿಭಾಜ್ಯ ಅಂಗ. ನಾನು ಆಡಿರುವ ಮಾತು ಆ ಚೌಕಟ್ಟಿನಲ್ಲಿ ನೋಡಬೇಕು.  ಇದು ಆರೋಗ್ಯಕರ ಪ್ರಜಾತಂತ್ರಕ್ಕೆ ಅಗತ್ಯವಾಗಿದೆ ಎಂದಿದ್ದಾರೆ.

ಚುನಾವಣೇ ದೃಷ್ಟಿಯಲ್ಲಿಟ್ಟುಕೊಂಡು ಹೇಳಿದ್ದೇನೆ.  ಕಾಂಗ್ರೆಸ್ಸಿಗರು ಟಪ್ಪು ಜಯಂತಿ ಆಚರಿಸಿದ್ದನ್ನ ವಿರೋಧಿಸಿದ್ದೇನೆ. ಸಿದ್ಧರಾಮಯ್ಯ ಜೊತೆ ವೈಯಕ್ತಿಕ ವಿರೋಧವಿಲ್ಲ. ರಾಜಕೀಯವಾಗಿ ವಿರೋಧ ಮಾಡುತ್ತೇವೆ. ನನ್ನ ಮಾತಿನಿಂದ ನೋವುಂಟಾಗಿದ್ದರೇ ವಿಷಾದಿಸುತ್ತೇನೆ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.

Key words: Minister- Aswath Narayan -regrets – controversial- words –against- Siddaramaiah.