ಮೇಕೆದಾಟು ಜಾರಿಗೊಳಿಸಿ ಗಂಡಸ್ತನ ತೋರಿ ಎಂದಿದ್ದ ಡಿ.ಕೆ ಸುರೇಶ್ ಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು.

ಬೆಂಗಳೂರು,ಜನವರಿ,11,2022(www.justkannada.in): ಬಿಜೆಪಿ ಸಂಸದರೆಲ್ಲಾ ಮೋದಿ ಎದರು ಹೋಗಿ ಮೇಕೆದಾಟು ಯೋಜನೆ ಜಾರಿಗೊಳಿಸಿ ಗಂಡಸ್ತನ ತೋರಿಸಿ ಎಂದಿದ್ಧ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ನಾವು ಗಂಡಸರು, ಗಂಡಸ್ತನವನ್ನ ಕೆಲಸದಲ್ಲಿ ತೋರುವೆವು. ನಮಗೆ ಕೆಲಸ ಮಾಡುವ ಧೈರ್ಯ, ಗಂಡಸ್ತನ ಇದೆ . ಕಾಂಗ್ರೆಸ್ ಜನರ ಪರವಾಗಿಲ್ಲ, ಬರೀ ಸುಳ್ಳು ಮೋಸ. ಮೇಕೆದಾಟು ಯೋಜನೆ ಕಾಂಗ್ರೆಸ್ ನಿಂದ ಅಸಾಧ್ಯ. ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆ ಮಾಡೇ ಮಾಡುತ್ತದೆ.  ಬಿಜೆಪಿ ಸರ್ಕಾರದಿಂದ ಮಾತ್ರ ಯೋಜನೆ ಅನುಷ್ಟಾನ ಸಾಧ್ಯ ಎಂದು ಟಾಂಗ್ ನೀಡಿದರು.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧವೂ ಗುಡುಗಿದ ಅಶ್ವತ್ ನಾರಾಯಣ್, 7 ಬಾರಿ ಶಾಸಕರಾಗಿರುವ ಡಿಕೆ ಶಿವಕುಮಾರ್ ಏನು ಮಾಡಿದ್ದಾರೆ. ರಾಮನಗರ ಜಿಲ್ಲೆಗೆ ಇವರ ಕೊಡುಗಡೆ ಏನು. ರಾಮನಗರ ಸಂಪನ್ಮೂಲ ದೋಚಿದ್ದಾರೆ. ಸಿದ್ಧರಾಮಯ್ಯ ವಿರುದ್ಧ ಪೈಪೊಟಿಗೆ ಬಿದ್ದಿದ್ದಾರೆ ಎಂದು ಕಿಡಿಕಾರಿದರು.

Key words: minister- ashwath narayan-MP-DK suresh