ಮೈಸೂರಿನ ಮಿನಿ ವಿಧಾನಸೌಧದಲ್ಲಿ ಕೈ ಕೊಟ್ಟ ಲಿಫ್ಟ್: ಪರದಾಡಿದ ವಿಶೇಷ ಚೇತನ ವ್ಯಕ್ತಿ…

ಮೈಸೂರು,ಫೆ,28,2020(www.justkannada.in): ಮೈಸೂರಿನ ಮಿನಿ ವಿಧಾನಸೌಧದಲ್ಲಿ ಲಿಫ್ಟ್ ಅರ್ಧದಲ್ಲೇ ಕೈಕೊಟ್ಟು ವಿಶೇಷ ಚೇತನರೊಬ್ಬರು ಪರದಾಡಿದ ಘಟನೆ ನಡೆದಿದೆ.

ಮೈಸೂರಿನ ಮಿನಿ ವಿಧಾನಸೌಧ ದಲ್ಲಿ ಲಿಫ್ಟ್ ಅರ್ಧದಲ್ಲೇ ಕೈ ಕೊಟ್ಟಿದ್ದು ಇದರಿಂದಾಗಿ ಲಿಫ್ಟ್ ನಲ್ಲಿ ಸಿಲುಕಿದ್ದ ವಿಶೇಷ ಚೇತನ ವ್ಯಕ್ತಿಯೊಬ್ಬರು ಸುಮಾರು 20 ನಿಮಿಷಗಳ ಕಾಲ  ಪರದಾಡಿದರು. ಕೈ ಕೊಟ್ಟ ಲಿಫ್ಟ್  ನಿಂದ ಕಂಗಾಲಾಗಿದ್ದ ವಿಶೇಷಚೇತನ ವ್ಯಕ್ತಿಯನ್ನ 20 ನಿಮಿಷಗಳ ಪ್ರಯತ್ನದಿಂದ ರಕ್ಷಣೆ‌‌ ಮಾಡಲಾಯಿತು.

ಸಾರ್ವಜನಿಕರು ಹಾಗೂ ಸಿಬ್ಬಂದಿಗಳ ನೆರವಿನಿಂದ ವ್ಯಕ್ತಿಯ ರಕ್ಷಣೆ ಮಾಡಲಾಗಿದ್ದು  ಲಿಫ್ಟ್ ನಿಂದ ಹೊರ ಬಂದು ವಿಶೇಷ ಚೇತನ ವ್ಯಕ್ತಿ ನಿಟ್ಟುಸಿರು ಬಿಟ್ಟರು.

Key words: Mini vidhan soudha-Mysore- lift -person.