ಮೈಸೂರಿನಲ್ಲಿ ಮಿನಿ ಉದ್ಯೋಗ ಮೇಳ : 50ಕ್ಕೂ ಹೆಚ್ಚು ಕಂಪನಿಗಳಿಂದ ನೇಮಕಾತಿ.

ಮೈಸೂರು,ಆಗಸ್ಟ್,30,2021(www.justkannada.in): ರಾಜ್ಯದಲ್ಲಿ ಕೊರೋನಾ ಮತ್ತು ಲಾಕ್ಡೌನ್ ನಿಂದಾಗಿ ನಿರುದ್ಯೋಗ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಯುವಜನತೆಗೆ ಅನುಕೂಲವಾಗುವಂತೆ ಮೈಸೂರಿನ ಕೆ.ಆರ್.ಕ್ಷೇತ್ರ ವ್ಯಾಪ್ತಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಸಲಾಗುತ್ತಿದ್ದು 50ಕ್ಕೂ ಹೆಚ್ಚು ಕಂಪನಿಗಳು ನೇಮಕಾತಿ ಮಾಡಿಕೊಳ್ಳುತ್ತಿವೆ.

ಕೌಶಲ್ಯಾಭಿವೃದ್ದಿ ಹಾಗೂ ಉದ್ಯಮಶೀಲತೆ ಇಲಾಖೆಯಿಂದ ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಉದ್ಯೋಗ ಮೇಳ ನಡೆಯುತ್ತಿದ್ದು, ಸಣ್ಣ ಹಾಗೂ ಬೃಹತ್ ಕೈಗಾರಿಕಾ ಘಟಕಗಳು ಉದ್ಯೋಗಮೇಳದಲ್ಲಿ ಭಾಗಿಯಾಗಿವೆ. ಇನ್ನು ಉದ್ಯೋಗ ಮೇಳದಲ್ಲಿ ಸುಮಾರು 2 ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದ್ದು, ಸ್ಥಳದಲ್ಲೇ ಆನ್ ಲೈನ್ ರಿಜೆಸ್ಟ್ರೇಷನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಬೆಮಲ್, ಜೆ.ಕೆ ಫ್ಯಾಕ್ಟರಿ, ರಾಣೆ ಮಡ್ರಾಸ್, ದುರ್ಗಾ ಸಲ್ಯೂಷನ್, ಗ್ರಾಸ್ ರೂಟ್ಸ್, ಆದಿತ್ಯಾ ಬಿರ್ಲಾ, ಕಾವೇರಿ ಆಸ್ಪತ್ರೆ, ನೆಸ್ಲೆ, ಜುಬಿಲಿಯಂಟ್, (ಯು.ಬಿ)ಯುನೈಟೆಡ್ ಬ್ರಿವರೀಸ್, ಸೆಕ್ಯೂರಿಟಿ ಏಜನ್ಸಿಗಳು, ಗಾರ್ಮೆಂಟ್ಸ್, ಹೆಲ್ತ್ ಸೆಕ್ಟರ್ ಸೇರಿ 50 ಕ್ಕೂ ಹೆಚ್ಚು ಕಂಪನಿಗಳಿಂದ ನೇಮಕಾತಿ ಮಾಡಿಕೊಳ್ಳುತ್ತಿದೆ.job fair – Mysore- Minister- Shivaram Hebbar -thousands - job

ಹೀಗಾಗಿ ಉದ್ಯಮ ಮೇಳ ಸದುಪಯೋಗ ಪಡಿಸಿಕೊಳ್ಳುವಂತೆ  ಯುವಜನತೆಗೆ ಕೆ.ಆರ್ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ಮನವಿ ಮಾಡಿದ್ದಾರೆ.

ENGLISH SUMMARY….

Mini Udyoga Mela in Mysuru: Recruitment for 50 companies
Mysuru, August 30, 2021 (www.justkannada.in): Unemployment has increased due to the COVID lockdown in the State. Keeping this in mind a mini Udyog mela has been organized for the benefit of the youth in K.R. constituency limits in Mysuru. More than 50 companies will take part in the mela.
The Skill Development and Entrepreneurship Department have organized the Udyog mela that is being held at the Dasara Exhibition grounds. Several small and large industrial companies are taking part in this mela. The mela aims to provide job opportunities to over two thousand candidates. Arrangements are made for online registration at the spot.
A few top companies that are taking part in the mela include BEML, J.K. Factory, Rane Madras, Durga Solution, Grass Roots, Aditya Birla, Kaveri Hospital, Nestle, Jubilant, United Breweries (UB), Security Agencies, Garments, Health Sector.job fair – Mysore- Minister- Shivaram Hebbar -thousands - job
Krishnaraja Assembly Constituency MLA S.A. Ramadas has urged the youth to utilize the opportunity.
Keywords: Mini udyog mela/ Mysuru/ 50 companies

Key words: Mini job fair – Mysore- Recruitment -over 50 -companies.