ತುಮಕೂರಿಗೆ ಮೆಟ್ರೋ, ಪರಮೇಶ್ವರ್ ಚಿಂತನೆ: ಕೈ ನಾಯಕರಿಂದಲೇ ವಿರೋಧ-ವಿ.ಸೋಮಣ್ಣ

ತುಮಕೂರು,ಡಿಸೆಂಬರ್,13,2025 (www.justkannada.in): ತುಮಕೂರಿಗೆ ಮೆಟ್ರೋ ತರಲು ಗೃಹ ಸಚಿವ ಪರಮೇಶ್ವರ್ ಯೋಚಿಸಿದ್ದಾರೆ.  ಆದರೆ ಅದಕ್ಕೆ ಕಾಂಗ್ರೆಸ್ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ಇಂದು ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ತುಮಕೂರಿಗೆ ಮೆಟ್ರೋ ತರುವ ಬಗ್ಗೆ ಪರಮೇಶ್ವರ್ ಒಳ್ಳೆಯ ಯೋಚನೆ ಮಾಡಿದ್ದಾರೆ.  ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಎಂದು ನಿನ್ನೆ ನನ್ನ ಬಳಿ ಕಾಂಗ್ರೆಸ್ ನಾಯಕರೊಬ್ಬರು ಬಂದು ಹೇಳಿದ್ದರು. ಈ ವೇಳೆ ಏಕೆ ತುಮಕೂರು ಮೆಟ್ರೋ ತೆಗೆದುಕೊಂಡು ಹೋಗ್ತಾರೆ ಅಂದ್ರು.  ಆಗ ಪರಮೇಶ್ವರ್  ಒಳ್ಳೆಯ ಕೆಲಸ ಮಾಡಿದ್ದಾರೆ ಅಂದೆ ಎಂದರು.

ಈ ಮೂಲಕ ಕಾಂಗ್ರೆಸ್ ನಾಯಕರೇ ತುಮಕೂರಿಗೆ ಮೆಟ್ರೋಗೆ ವಿರೋಧ ವ್ಯಕ್ತಪಡಿಸಿದ್ದಾರೆ.  ತುಮಕೂರಿಗೆ  ಮೆಟ್ರೋ ರೈಲು ತರಲು ನನ್ನ ಸಹಮತವಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.

Key words: Metro, Tumakuru, Parameshwar , V. Somanna