ಮೈಸೂರು,ಜುಲೈ,10,2025 (www.justkannada.in): ಸಿಎಂ ತವರಲ್ಲಿ ಮೀಟರ್ ಬಡ್ಡಿ ದಂಧೆ ಆರೋಪ ಕೇಳಿ ಬಂದಿದ್ದು, ಬಡ್ಡಿ ಹಣ ಕಟ್ಟದಿದ್ದಕ್ಕೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮೈಸೂರಿನ ಸತ್ಯನಗರದ ಮಜ್ಝಾರ್ ಪಾಷ ಮೇಲೆ ಉದಯಗಿರಿಯ ಇರ್ಫಾನ್ ಎಂಬಾತ ಹಲ್ಲೆ ನಡೆಸಿದ್ದಾನೆ. 1 ಸಾವಿರ ಹಣ ಕೊಟ್ಟು 8 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ ಆರೋಪ ಕೇಳಿ ಬಂದಿದೆ.
ಒಂದು ಸಾವಿರ ಹಣಕ್ಕೆ ನಾಲ್ಕು ಸಾವಿರ ಬಡ್ಡಿ ಕಟ್ಟಿದ್ದು ಪುನಃ 8 ಸಾವಿರ ಹಣ ಕಟ್ಟು ಎಂದು ಇರ್ಫಾನ್ ಆವಾಜ್ ಹಾಕಿ ಆಟೋ ಚಾಲಕ ಮುಜ್ಝಾರ್ ಪಾಷ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ದೂರು ನೀಡಲು ಹೋದರೆ ಉದಯಗಿರಿ ಠಾಣಾ ಪೊಲೀಸರು ದೂರು ತೆಗೆದುಕೊಳ್ಳದ ಆರೋಪ ಕೇಳಿ ಬಂದಿದ್ದು, ನ್ಯಾಯ ಕೊಡಿಸಿ ಎಂದು ಮಾಜರ್ ಪಾಷಾ ಕಣ್ಣೀರು ಹಾಕಿದ್ದಾರೆ. ಮೆಡಿಕಲ್ ಮಾಡಿಸಿದರೂ ಕೂಡ ಪೊಲೀಸರು ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಲಾಗಿದೆ.
Key words: Meter interest scam, assault, Mysore