ಮೆಗಾಸ್ಟಾರ್ ಚಿರಂಜೀವಿ ‘ಆಚಾರ್ಯ’ ಬಿಡುಗಡೆ ದಿನಾಂಕವೂ ಮುಂದಕ್ಕೆ

ಬೆಂಗಳೂರು, ಏಪ್ರಿಲ್ 29, 2021 (www.justkannada.in): ಮೆಗಾಸ್ಟಾರ್ ಚಿರಂಜೀವಿ ಅವರ ಅಭಿನಯದ ಬಹುನಿರೀಕ್ಷೆಯ ಚಿತ್ರ‘ಆಚಾರ್ಯ’ ಬಿಡುಗಡೆ ದಿನವನ್ನು ಮುಂದೂಡಲಾಗಿದೆ.

ಅಂದಹಾಗೆ ಮೆಗಾಸ್ಟಾರ್ ನಟನೆಯ ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಏಕಕಾಲದಲ್ಲಿ ನಡೆಯುತ್ತವೆ ಎನ್ನಲಾಗಿದೆ.

ಕೊರೊನಾ ಸೋಂಕಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆಯ ದಿನಾಂಕವನ್ನು ಮುಂದೂಡುವುದು ಸೂಕ್ತ ಎಂಬ ಸಲಹೆ ಮೇರೆಗೆ ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆ.

ಕೊರೊನಾ ಪ್ರಕರಣ ಸಾಮಾನ್ಯ ಸ್ಥಿತಿಗೆ ಬಂದಾಗ ಹೊಸ ಬಿಡುಗಡೆಯ ದಿನಾಂಕವನ್ನು ಘೋಷಿಸುವುದಾಗಿ ಚಿತ್ರ ತಂಡ  ತಿಳಿಸಿದೆ.