ಔಷಧಿಗಾಗಿ ಬಡ ರೋಗಿಗಳ ಪರದಾಟ: ಇತ್ತ ಅವಧಿ ಮೀರಿದ ಔಷಧಿ ರಸ್ತೆಗೆ ಎಸೆದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು

ಮೈಸೂರು,ಜುಲೈ,9,2025 (www.justkannada.in): ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಾಗಿ ಬಡ ರೋಗಿಗಳು ಪರದಾಟ ನಡೆಸುತ್ತಿದ್ದರೇ ಇತ್ತ ನೀಡಿರುವ ಔಷಧಿ ಮಾತ್ರೆಗಳನ್ನ ಬಳಸದೇ ಅವಧಿ ಮುಗಿದ ಬಳಿಕ ಅವುಗಳನ್ನ ರಸ್ತೆಗೆ ಎಸೆದು ಸಿಬ್ಬಂದಿಗಳು ಕಳ್ಳಾಟವಾಡಿರುವುದು ಬಯಲಾಗಿದೆ.

ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ಅಣ್ಣೂರು ಗ್ರಾಮದ ಹೊರ ವಲಯದಲ್ಲಿ ರಾಶಿ ರಾಶಿ ಔಷಾದಿಗಳು ಬಿದ್ದಿದ್ದು, ಸರ್ಕಾರಿ ಆಸ್ಪತ್ರೆಗೆ ಬರುವ ಜನರಿಗೆ ಔಷಧಿ ನೀಡದೆ ಅವಧಿ ಮುಗಿದ ಬಳಿಕ ರಸ್ತೆಗೆ ಎಸೆದು ವೈದ್ಯರು ಕಳ್ಳಾಟವಾಡಿದ್ದಾರೆ.

ಅವಧಿ ಮೀರಿದ ಹೊಟ್ಟೆ ನೋವು ಮಾತ್ರೆಗಳು, ಎದೆ ನೋವು, ಪೋಷಕಾಂಶ ಸೇರಿದಂತೆ ಗರ್ಭಿಣಿಯರಿಗೆ ನೀಡಬೇಕಾಗಿರುವ ಮಾತ್ರೆಗಳು, ಇಂಜೆಕ್ಷನ್ ಟ್ಯೂಬ್ ಸೀರೇಂಜ್ ಗಳನ್ನು ಸಿಬ್ಬಂದಿಗಳು ರಸ್ತೆಗೆ ಎಸೆದಿದ್ದಾರೆ. ಸಕಾಲದಲ್ಲಿ ಔಷಧಿ ಬಳಕೆ ಮಾಡದೇ ಅವಧಿ ಮುಗಿದ ಬಳಿಕ ರಸ್ತೆಯ ಪೊದೆಯಲ್ಲಿ ಔಷಧಿಗಳನ್ನ ಎಸೆಯಲಾಗಿದೆ.

ಅಣ್ಣೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಔಷಧಿ ಎಸೆದಿರುವ ಶಂಕೆ ವ್ಯಕ್ತವಾಗಿದ್ದು ಆದರೆ ಇದು ನಮ್ಮ ಪ್ರಾಥಮಿಕ ಕೇಂದ್ರಕ್ಕೆ ಸೇರಿದ ಔಷಧಿ ಅಲ್ಲ ಎಂದು ಅಣ್ಣೂರು ಕೇಂದ್ರದ ಸಿಬ್ಬಂದಿ ಹೇಳಿದ್ದಾರೆ. ಇನ್ನು  ಔಷಧಿ ನಿಯಮಬದ್ಧವಾಗಿ ವಿಲೇವಾರಿ ಮಾಡದಕ್ಕೆ ಸಾರ್ವಜನಿಕರು ಕಿಡಿ ಕಾರಿದ್ದು, ಶೀಘ್ರವಾಗಿ ಔಷಧಿ ಯಾವ ಕೇಂದ್ರಕ್ಕೆ ಸರಬರಾಜು ಮಾಡಿತ್ತು. ಎಲ್ಲಿಂದ ಬಿಸಾಡಿದ್ದಾರೆ ಎಂದು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೆಚ್.ಡಿ ಕೋಟೆಯ ತಾಲ್ಲೂಕು ಆರೋಗ್ಯಾಧಿಕಾರಿ ರವಿ ಕುಮಾರ್ ಭರವಸೆ ನೀಡಿದ್ದಾರೆ.vtu

Key words: Poor patients, medicine,  Government hospital, HD Kote