ಕಾಲುವೆಯಲ್ಲಿ ಮುಳುಗಿ ವೈದ್ಯಕೀಯ ವಿದ್ಯಾರ್ಥಿ ಸಾವು.

ಮೈಸೂರು,ಅಕ್ಟೋಬರ್,30,2023(www.justkannada.in): ಈಜು ಬಾರದಿದ್ದರೂ ಕಾಲುವೆಗೆ ಇಳಿದಿದ್ದ ವೈದ್ಯಕೀಯ ವಿದ್ಯಾರ್ಥಿ ಮುಳುಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಬಿದರಹಳ್ಳಿ ಗ್ರಾಮದ ಬಳಿ  ನಡೆದಿದೆ.

ಬೆಂಗಳೂರಿನ ನಿವಾಸಿ ಶೈಲೇಂದ್ರ ಎಂಬುವರ ಪುತ್ರ ಕಿಶನ್ (21) ಮೃತ ವ್ಯಕ್ತಿ. ಬೆಂಗಳೂರಿನ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ತರಬೇತಿಗಾಗಿ ಐವರು ವಿದ್ಯಾರ್ಥಿಗಳು ಆಗಮಿಸಿದ್ದರು.

ಈ ನಡುವೆ ನಿನ್ನೆ ಬೀಚನಹಳ್ಳಿ ಎಡದಂಡೆ ನಾಲೆಗೆ ನೀರಿನಲ್ಲಿ ಈಜಲು ತೆರಳಿದ್ದಾರೆ.  ಈ ವೇಳೆ ಈಜಲು ಬಾರದ ಕಿಶನ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ನೀರಲ್ಲಿ ಮುಳುಗಿ ಸಾಯುತ್ತಿದ್ದ ಕಿಶನ್ ಅನ್ನು ಸ್ನೇಹಿತರು ಮೇಲೆತ್ತಲು ಪ್ರಯತ್ನಿಸಿದರಾದರೂ ಮೇಲುತ್ತುವ ವೇಳೆಗಾಗಲೇ ಕಿಶನ್ ಸಾವನ್ನಪ್ಪಿದ್ದಾನೆ. ನಂತರ‌ ಮೃತ ದೇಹವನ್ನು ಸರಗೂರಿನ ಆಸ್ಪತ್ರೆಗೆ ರವಾನಿಸಲಾಯಿತು.

Key words: Medical- student death- drowned – canal-mysore