ಇಂದು ದೇಶಾದ್ಯಂತ ಮೇಡಿಕಲ್ ಶಾಪ್ ಗಳು ಬಂದ್: ಕರ್ನಾಟಕದಲ್ಲೂ ಸ್ತಬ್ಧ

ಬೆಂಗಳೂರು,ಮೇ,20,2026 (www.justkannada.in):  ಆನ್ ಲೈನ್ ನಲ್ಲಿ ಔಷಧಿ ಮಾರಾಟ ವಿರೋಧಿಸಿ ಇಂದು ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್ ಆಗಿವೆ.

ಆನ್ ಲೈನ್ ನಲ್ಲಿ ಅನಿಯಂತ್ರಿತವಾಗಿ ಔಷಧಿಗಳ ಮಾರಾಟ ವಿರೋಧಿಸಿ ಇಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್ ಗೆ ಎಐಒಸಿಡಿ(AIOCD) ಕರೆ ನೀಡಿದೆ. ಇಂದು 24 ಗಂಟೆಗಳ ಕಾಲ ಮೆಡಿಕಲ್ ಶಾಪ್ ಗಳು ಬಂದ್ ಆಗಲಿವೆ.

ಕರ್ನಾಟಕದಲ್ಲೂ ಕೆಲವು ಕಡೆಗಳಲ್ಲಿ ಮೆಡಿಕಲ್ ಶಾಪ್ ಗಳು ಸ್ತಬ್ದವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  1200ಕ್ಕೂ ಮೆಡಿಕಲ್ ಶಾಪ್ ಗಳು ಬಂದ್ ಗೆ ಬೆಂಬಲಿಸಿ ಸ್ಥಗಿತವಾಗಿವೆ.  ಗದಗ, ತುಮಕೂರು, ಶಿವಮೊಗ್ಗ, ಬಾಗಲಕೋಟೆ  ಸೇರಿ ಹಲವಡೆ ಮೆಡಿಕಲ್ ಶಾಪ್ ಬಂದ್ ಗೆ ಬೆಂಬಲ ನೀಡಲಾಗಿದೆ. ಒಟ್ಟಾರೇ ಸುಮಾರು 26 ಸಾವಿರ ಮೆಡಿಕಲ್ ಶಾಪ್ ಗಳು ಬಂದ್ ಆಗುವ ಸಾಧ್ಯತೆ ಇದೆ.

Key words:   Medical shops, country, closed, today