ಸೋನಿಯಾ ಗಾಂಧಿ ಪಾದಯಾತ್ರೆ ವೇಳೆ  ಮಾಧ್ಯಮದವರ ಮೇಲೆ ಪೊಲೀಸರಿಂದ ಹಲ್ಲೆ..

ಮಂಡ್ಯ ಅಕ್ಟೋಬರ್,6,2022(www.justkannada.in):  ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ  ಮಂಡ್ಯದಲ್ಲಿ ಸಾಗುತ್ತಿರುವ  ಭಾರತ್ ಜೋಡೋ ಯಾತ್ರೆಯಲ್ಲಿ ಮಾಧ್ಯಮದವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಂಡ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಜ್ಜೆ ಹಾಕುತ್ತಿದ್ದಾರೆ. ಈ ವೇಳೆಯಲ್ಲಿ ಸೆಕ್ಯೂರಿಟಿ ನೆಪದಲ್ಲಿ ಮಾಧ್ಯಮದವರ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದಾರೆ ಎನ್ನಲಾಗಿದೆ.

ಪೊಲೀಸರು ಮಾಧ್ಯಮದವರನ್ನ ನೂಕಾಟ ತಳ್ಳಾಟ ನಡೆಸಿದ್ದು, ಹಲ್ಲೆಯಿಂದಾಗಿ ವರದಿಗಾರರೊಬ್ಬರಿಗೆ ಗಾಯಗಳಾಗಿದೆ ಎನ್ನಲಾಗುತ್ತಿದೆ. ಇನ್ನು ಗಲಾಟೆ ನಡೆಯುತ್ತಿದ್ದರೂ ಮಂಡ್ಯ ಎಸ್ ಪಿ ಯತೀಶ್ ಮೌನ ವಹಿಸಿದ್ದು, ಈ ನಡೆಗೆ ವ್ಯಾಪಕ  ಆಕ್ರೋಶ ವ್ಯಕ್ತವಾಗಿದೆ.

Key words: Media –persons- assult-police – Sonia Gandhi –barath jodo Padayatra