ಮೈಸೂರು, ಸೆ.08,2025: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಆನ್ ಲೈನ್ ಹರಾಜಿನಲ್ಲಿ ಭಾರಿ ಕುತೂಹಲ ಮೂಡಿಸಿದ್ದ ನಿವೇಶನಗಳ ಪೈಕಿ ದುಬಾರಿ ಬೆಲೆಗೆ ಬಿಡ್ ಆಗಿದ್ದ ನಿವೇಶನಕ್ಕೆ ಬಿಡ್ ದಾರ ಹಣ ಪಾವತಿಸುವ ಮೂಲಕ ಊಹಪೋಹಕ್ಕೆ ತೆರೆ ಬಿದ್ದಿದೆ.
ವಿಜಯನಗರ ದ ನಾಲ್ಕನೇ ಹಂತ, 2 ನೇ ಫೇಸ್ ನ 50 x 80 ನಿವೇಶನ ಹಾಗೂ 20 x 30 ನಿವೇಶನಗಳು ಕ್ರಮವಾಗಿ 9 ಕೋಟಿ ಹಾಗೂ 2 ಕೋಟಿ ರೂ.ಗೆ ಹರಾಜಾಗಿತ್ತು. ಈ ಪೈಕಿ 50 x 80 ನಿವೇಶನದ ಬಿಡ್ ದಾರ ಮೊದಲ ಕಂತಿನ ಹಣದ ಮೊತ್ತವಾದ 2,16,56,750 ರೂ.ಗಳನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪಾವತಿಸಿದ್ದಾರೆ. ಆ ಮೂಲಕ ಹರಾಜಿನ ಬಳಿಕ ಕೇಳಿ ಬಂದಿದ್ದ ಉಹಾಪೋಹಗಳಿಗೆ ತೆರೆ ಬಿದ್ದಿದೆ.
ನಿವೇಶನಗಳ ಆನ್ ಲೈನ್ ಹರಾಜಿನ ಬಗ್ಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಆರ್.ರಕ್ಷಿತ್ ಜಸ್ಟ್ ಕನ್ನಡ ಜತೆ ಮಾತನಾಡಿ ಹೇಳಿದಿಷ್ಟು..
ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ಮೊಟ್ಟ ಮೊದಲ ಆನ್ ಲೈನ್ ನಿವೇಶನಗಳ ಹರಾಜು ಕಳೆದ ತಿಂಗಳು ನಡೆಸಲಾಯಿತು. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಎಂಡಿಎ ಹರಾಜಿಗಿಟ್ಟಿದ್ದ 200 ಸೈಟ್ ಗಳ ಪೈಕಿ 110 ನಿವೇಶನಗಳು ಹರಾಜಿನಲ್ಲಿ ಬಿಕರಿಯಾಯಿತು. ಒಬ್ಬರೇ ಬಿಡ್ ದಾರರಿದ್ದ ಕಾರಣ 50 ನಿವೇಶನಗಳು ಹರಾಜಾಗದೆ ರದ್ದಾಯಿತು. ಉಳಿದ 40 ನಿವೇಶನ ಬಿಡ್ ದಾರರು ಆಸಕ್ತಿ ತೋರಿಸದ ಕಾರಣ ಹರಾಜಾಗಲಿಲ್ಲ. ಹರಾಜಾದ ನಿವೇಶನಗಳಿಂದ ಪ್ರಾಧಿಕಾರಕ್ಕೆ 121 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದರು.
ಕುತೂಹಲ ಮೂಡಿಸಿದ್ದ ವಿಜಯನಗರದ ನಾಲ್ಕನೇ ಹಂತ, 2 ನೇ ಫೇಸ್ ನ 50 x 80 ನಿವೇಶನದ ಬಿಡ್ ದಾರರು ಹಣ ಪಾವತಿ ಮಾಡಿದ್ದಾರೆ. ಮೊದಲ ಕಂತಿನ ಹಣವಾಗಿ ಒಟ್ಟು ಬಿಡ್ ಮೊತ್ತವಾದ 9 ಕೋಟಿ. ರೂ. ಗಳಲ್ಲಿ ಶೇ. 25 ರಷ್ಟು ಹಣವನ್ನು ಅಂದ್ರೆ 2,16,56,750 ರೂ.ಗಳನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪಾವತಿಸಿದ್ದಾರೆ ಎಂದು ಆಯುಕ್ತ ರಕ್ಷಿತ್ ಸ್ಪಷ್ಟಪಡಿಸಿದರು.
key words: MDA-MUDA-site-online-auction-mysore
SUMMARY:
The site was bid at a high price: Rs 22,500 per square foot. First installment payment.
The 50 x 80 plot and 20 x 30 plot of the fourth phase, phase 2 of Vijayanagara were auctioned for Rs. 9 crore and Rs. 2 crore respectively. Out of these, the bidder for the 50 x 80 plot has paid the first installment amount of Rs. 2,16,56,750. This has put an end to the speculations that were heard after the auction.