ಯುದ್ಧದಲ್ಲಿ ಹುತಾತ್ಮರಾದ ಹಾಗೂ  ಅಂಗವೈಕಲ್ಯರಾದ ಯೋಧರು ಮತ್ತು ಕುಟುಂಬಕ್ಕೆ MDA ನಿವೇಶನ ಪತ್ರ

The Mysore Development Authority distributed plot letters to the martyred and disabled soldiers and their families. Plots were distributed to a total of 7 people, including four martyrs and three permanently disabled. A 60X 40 plot was distributed to the officers and 30X 40 plot to others. District In-charge Minister Dr. H.C. Mahadevappa, Deputy Commissioner Laxmikantha Reddy and MDA Commissioner K.R. Rakshit were present on the occasion.

vtu

ಮೈಸೂರು, ಸೆ.೨೦,೨೦೨೫: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ  ಯುದ್ಧದಲ್ಲಿ ಹುತಾತ್ಮರಾದ ಹಾಗೂ  ಅಂಗವೈಕಲ್ಯರಾದ ಯೋಧರು ಮತ್ತು ಕುಟುಂಬಕ್ಕೆ ನಿವೇಶನ ಪತ್ರ ವಿತರಣೆ ಮಾಡಲಾಯಿತು.

ನಾಲ್ವರು ಹುತಾತ್ಮರು ಹಾಗೂ ಮೂವರು ಶಾಶ್ವತ ಅಂಗವೈಕಲ್ಯರಾದವರು ಸೇರಿದಂತೆ ಒಟ್ಟು ೭ ಮಂದಿಗೆ ನಿವೇಶನಗಳನ್ನು ವಿತರಿಸಲಾಯಿತು. ಅಧಿಕಾರಿ ವರ್ಗದವರಿಗೆ  60X 40 ಅಳತೆ ನಿವೇಶನ ಹಾಗೂ ಇತರರಿಗೆ 30X 40  ಅಳತೆ ನಿವೇಶನ ವಿತರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹಾದೇವಪ್ಪ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್‌ ಈ ವೇಳೆ ಹಾಜರಿದ್ದರು.

ನಿವೇಶನ ಪತ್ರ ಪಡೆದವರ ವಿವರ :

೧) ಹೆಸರು : ಎಂ.ವಿ ಪ್ರಾಂಜಲ್

ಹುದ್ದೆ : ಕ್ಯಾಪ್ಟನ್, ಭಾರತೀಯ ಭೂಸೇನೆ

ರೆಜಿಮೆಂಟ್: 4ನೇ ಘಾಟಕ ಬಟಾಲಿಯನ್, 5ನೇ ಜವಾನ್ಸ್ (4th Garhwal Rifles) .

ಸೇವೆಗೆ ಸೇರಿದ ದಿನಾಂಕ : ಜನವರಿ, 2014

ಸೇವೆ ಸಲ್ಲಿಸಿದ ವರ್ಷಗಳು : 9 ವರ್ಷ

ವಿವರ :

ಕ್ಯಾಪ್ಟನ್ ಪ್ರಾಂಜಲ್ ರವರು ಬಿ.ಇ ( ಕೆಮಿಕಲ್ ಇಂಜಿನಿಯರ್, ಆರ್. ವಿ. ಕಾಲೇಜು ಬೆಂಗಳೂರು ಇಲ್ಲಿ ಸೀಟು ದೊರೆತರೂ ಸಹ ಅಲ್ಲಿ ವಿದ್ಯಾಬ್ಯಾಸ ಮಾಡದೇ ಸೇನಾ ತಾಂತ್ರಿಕ ಪ್ರವೇಶಾತಿ ಯೋಜನೆಯಡಿ ನಡೆಸಲಾಗುವ ಪರಿಕ್ಷೆಯಲ್ಲಿ 2ನೇ Rank ಪಡೆಯುವುದರ ಮೂಲಕ ಭೂಸೇನೆಗೆ ಆಯ್ಕೆಗೊಂಡು ಅಧಿಕಾರಿಗಳ ತರಬೇತಿ ಅಕಾಡೆಮಿ, ಗಯಾ ಇಲ್ಲಿ ತರಬೇತಿಯ ನಂತರ 2014 ರಲ್ಲಿ ಸೇನೆಯಲ್ಲಿ ಸೇವೆ ಪ್ರಾರಂಭಿಸಿರುತ್ತಾರೆ. ನವರಂಬರ್ 2023 ರಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದ 63ನೇ ರಾಷ್ಟ್ರೀಯ ರೈ ಘಲ್ಸ್ ಬೆಟಾಲಿಯನ್ ಅನ್ನು ಕಾಶ್ಮೀರ ಕಣಿವೆಯ ರಾಚೌರಿ ವಲಯದಲ್ಲಿ ಉಗ್ರಗಾಮಿಗಳ ನಿಗ್ರಹದ ಕಾರ್ಯಚರಣೆಗೆ ನಿಯೋಜತ ರಾಗಿದ್ದು, ಸಾರ್ವಜನಿಕರ ಪ್ರಾಣ ಉಳಿಸುವ ಮತ್ತು ದೇಶ ರಕ್ಷಣೆಯ ಕಾರ್ಯಚರಣೆಯಲ್ಲಿ ಉಗ್ರಗಾಮಿಗಳ ಗುಂಡಿಗೆ ಕ್ಯಾಪ್ಟನ್ ಪ್ರಾಂಜಲ್ ಸೇರಿದಂತೆ ಇತರೆ ನಾಲ್ವರು ಮೃತ ಪಟ್ಟಿರುತ್ತಾರೆ. ಇವರಿಗೆ ಭಾರತ ಸರ್ಕಾರವು ಮರಣೋತ್ತರವಾಗಿ ” ಶೌರ್ಯ ಚಕ್ರ * ಪ್ರಶಸ್ತಿಯನ್ನು ದಿನಾಂಕ 26-01-2024 ರಂದು ನೀಡಿ ಗೌರವಿಸಿದೆ.

೨) ಹೆಸರು : ಸುಬ್ರಮಣಿ ಪಿ.ಬಿ.

ಹುದ್ದೆ: ಸುಬೇದಾರ್

ರೆಜಿಮೆಂಟ್: 9-ಮರಾಠ ರೆಜಿಮೆಂಟ್

ಸೇವೆಗೆ ಸೇರಿದ ದಿನಾಂಕ 15-12-1977

ಸೇವೆ ಸಲ್ಲಿಸಿದ ವರ್ಷಗಳು : 24 ವರ್ಷ

ಭಾಗವಹಿಸಿರುವ ವಿಶೇಷ ಕಾರ್ಯಾಚರಣೆ : ಆಪರೇಷನ್ ರಕ್ಷಕ್, ಜಮ್ಮು & ಕಾಶ್ಮೀರ್ ಕಾರ್ಗಿಲ್ ಯುದ್ಧ 1999

ಯುದ್ಧದಿಂದ ಉಂಟಾದ ಪರಿಣಾಮ : 2000 ನೇ ಸಾಲಿನಲ್ಲಿ ಪಾಕಿಸ್ತಾನದ ಸೇನೆಯು ಭಾರತ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಪೂಂಚ್, ಬಲ್ನಾಯ್ ಎಲ್.ಓ.ಸಿ. ಪ್ರದೇಶದಲ್ಲಿ ಯುದ್ಧ ಸಂಘರ್ಷ ಉಂಟಾಗಿ ಎಡಗಾಲಿಗೆ ಗಂಭೀರಗಾಯ.

ನಿವೃತ್ತಿಯಾದ ದಿನಾಂಕ: 2002

೩)  ಹೆಸರು : ರಮೇಶ ಬಿ.

ಹುದ್ದೆ: ಹಮಲ್ದಾರ್

ರೆಜಿಮೆಂಟ್ : ರೆಜಿಮೆಂಟ್ ಆಫ್ ಆರ್ಟಿಲರಿ

ಸೇವೆಗೆ ಸೇರಿದ ದಿನಾಂಕ:21-07-2001

ಸೇವೆ ಸಲ್ಲಿಸಿದ ವರ್ಷಗಳು: 19 ವರ್ಷ

ಭಾಗವಹಿಸಿರುವ ವಿಶೇಷ ಕಾರ್ಯಾಚರಣೆ :ಆಪರೇಷನ್ ರಕ್ಷಕ್, ಜಮ್ಮು & ಕಾಶ್ಮೀರ್

ಯುದ್ಧದಿಂದ ಉಂಟಾದ ಪರಿಣಾಮ : ಜಮ್ಮು & ಕಾಶ್ಮೀರ್ನ ಬೊವ್ ಕ್ಯಾಂಪ್ ಸ್ಥಳವನ್ನು ದಾಳಿ ಮಾಡಿದ ಸಂದರ್ಭದಲ್ಲಿ 3 ಬುಲೆಟ್ಸ್ ತಗುಲಿದ್ದು, ಬೆನ್ನು ಮೂಳೆ ಗಾಯಗೊಂಡಿರುತ್ತದೆ.

ನಿವೃತ್ತಿಯಾದ ದಿನಾಂಕ: 2020

೪) ಹೆಸರು: ರಾಧಾಕೃಷ್ಣ ಕೆ.ಎಸ್.

ಹುದ್ದೆ : ನಾಯ್ಕ್

ರೆಜಿಮೆಂಟ್ : 12-ಮದ್ರಾಸ್ ರೆಜಿಮೆಂಟ್

ಸೇವೆಗೆ ಸೇರಿದ ದಿನಾಂಕ: 21-08-1984

ಸೇವೆ ಸಲ್ಲಿಸಿದ ವರ್ಷಗಳು: 16 ವರ್ಷ

: ಆಪರೇಷನ್ ಪವನ್, ಶ್ರೀಲಂಕಾ 1987

ಭಾಗವಹಿಸಿರುವ ವಿಶೇಷ ಕಾರ್ಯಾಚರಣೆ

ಯುದ್ಧದಿಂದ ಉಂಟಾದ ಪರಿಣಾಮ : ಶ್ರೀಲಂಕಾದ ಎಲ್.ಟಿ.ಟಿ.ಇ ರವರಿಂದ ದಾಳಿಗೆ ಒಳಗಾಗಿ ಬುಲೆಟ್ಸ್ ತಗುಲಿ ಬೆನ್ನುಮೂಳೆ ಗಾಯಗೊಂಡಿರುತ್ತದೆ. ಶೇ.90 ರಷ್ಟು ದೈಹಿಕ ಅಂಗವೈಕಲ್ಯ ಉಂಟಾಗಿರುತ್ತದೆ.

ನಿವೃತ್ತಿಯಾದ ದಿನಾಂಕ: 10-11-2011

೫) ಹೆಸರು : ಕಿರಣ್ ಕುಮಾರ್ ಬಿ.ಎನ್.

ಹುದ್ದೆ : ನಾಯ್ಕ್

ರೆಜಿಮೆಂಟ್: 9-ಮದ್ರಾಸ್ ರೆಜಿಮೆಂಟ್

ಸೇವೆಗೆ ಸೇರಿದ ದಿನಾಂಕ :25-04-1996

ಸೇವೆ ಸಲ್ಲಿಸಿದ ವರ್ಷಗಳು : 12 ವರ್ಷ

ಭಾಗವಹಿಸಿರುವ ವಿಶೇಷ ಕಾರ್ಯಾಚರಣೆ : ಕಾರ್ಗಿಲ್ ಯುದ್ಧ ಆಪರೇಷನ್ ರಕ್ಷಕ್, ಜಮ್ಮು&ಕಾಶೀರ

ಯುದ್ಧದಿಂದ ಉಂಟಾದ ಪರಿಣಾಮ: ಯುದ್ಧದ ಸಂದರ್ಭದಲ್ಲಿ ಮರಣ ಹೊಂದಿರುತ್ತಾರೆ.

ನಿವೃತ್ತಿಯಾದ ದಿನಾಂಕ : 2008 ರಲ್ಲಿ ಯುದ್ಧ ಸಮಯದಲ್ಲಿ ಮರಣಹೊಂದಿರುತ್ತಾರೆ.

) ಹೆಸರು : ಗುರು ಹೆಚ್.

ಹುದ್ದೆ: ಸಿ.ಟಿ.ಜಿ.ಡಿ

ರೆಜಿಮೆಂಟ್: ಸಿ.ಆರ್.ಪಿ.ಎಫ್

ಸೇವೆಗೆ ಸೇರಿದ ದಿನಾಂಕ: 24-02-2011

ಸೇವೆ ಸಲ್ಲಿಸಿದ ವರ್ಷಗಳು: 08 ವರ್ಷ

ಭಾಗವಹಿಸಿರುವ ವಿಶೇಷ ಕಾರ್ಯಾಚರಣೆ:  ಜಾರ್ಖಂಡ್ ಮಧ್ಯಪ್ರದೇಶ, ಜಮ್ಮು&ಕಾಶ್ಮೀರದಲ್ಲಿ ಸೇವೆ ಸಲ್ಲಿಸಲಾಗಿದೆ.

ಯುದ್ಧದಿಂದ ಉಂಟಾದ ಪರಿಣಾಮ: ಪುಲ್ವಾಮ ಪ್ರದೇಶದ ದಾಳಿಗೆ ಒಳಗಾಗಿರುತ್ತಾರೆ.

ನಿವೃತ್ತಿಯಾದ ದಿನಾಂಕ : 14-02-2019

೭) ಹೆಸರು: ದೇವರಾಜು ಎಸ್.ಪಿ.

ಹುದ್ದೆ: ಆರ್ಡಿನರಿ ನಾಯ್ಕ್ ಸುಬೇದಾರ್

ರೆಜಿಮೆಂಟ್ : 6-ಮದ್ರಾಸ್ ಇನ್ಫ್ಯಾಂಟ್ರಿ

ಸೇವೆಗೆ ಸೇರಿದ ದಿನಾಂಕ : 18-04-1994

ಸೇವೆ ಸಲ್ಲಿಸಿದ ವರ್ಷಗಳು : 24 ವರ್ಷ

ಭಾಗವಹಿಸಿರುವ ವಿಶೇಷ ಕಾರ್ಯಾಚರಣೆ : ಆಪರೇಷನ್ ಹಿಲಾಜತ್, ಮಣಿಪುರ ಆಪರೇಷನ್ ವಿಜಯ್, 1999 ಆಪರೇಷನ್ ಪರಬ್ರಹ್ಮ, 2001-02 ಆಪರೇಷನ್ ರಕ್ಷಕ್, ಜಮ್ಮು & ಕಾಶ್ಮೀರ

ಯುದ್ಧದಿಂದ ಉಂಟಾದ ಪರಿಣಾಮ: ದಿನಾಂಕ:14.06.1995 ರಲ್ಲಿ ಯುದ್ಧ ಸಂದರ್ಭದಲ್ಲಿ 12 ಬುಲೆಟ್ಸ್ ತಗುಲಿದ್ದುಮ ಶೇ.75 ರಷ್ಟು ದೈಹಿಕ ಅಂಗವೈಕಲ್ಯ ಉಂಟಾಗಿರುತ್ತದೆ.

ನಿವೃತ್ತಿಯಾದ ದಿನಾಂಕ: 30-04-2018

KEY WORDS: MDA, site allotment letter, war martyrs, disabled soldiers,

vtu

SUMMARY:

MDA: site allotment letter for war martyrs and disabled soldiers and their families

The Mysore Development Authority distributed plot letters to the martyred and disabled soldiers and their families. Plots were distributed to a total of 7 people, including four martyrs and three permanently disabled. A 60X 40 plot was distributed to the officers and 30X 40 plot to others. District In-charge Minister Dr. H.C. Mahadevappa, Deputy Commissioner Laxmikantha Reddy and MDA Commissioner K.R. Rakshit were present on the occasion.