MDA: ದಸರಾ ಬಳಿಕ 300 ನಿವೇಶನಗಳ “ ಇ- ಹರಾಜು “

Mysuru: The Mysuru Urban Development Authority (MDA) has decided to sell residential sites through an e-auction system. The move aims to ensure transparency in site allocation and strengthen the financial resources of the authority. Interested applicants must register on the official MDA website and deposit the prescribed Earnest Money Deposit (EMD). The e-auction will be conducted on specified dates and times, where participants can bid online. The highest bidder will be allotted the site. According to officials, the e-auction method is expected to eliminate middlemen and provide direct opportunities to the public.

vtu

ಮೈಸೂರು, ಸೆ.೧೬,೨೦೨೫ : ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ತನ್ನ ಮೊದಲ ಇ-ಹರಾಜಿಗೆ (Online Auction) ಸಾರ್ವಜನಿಕ ವಲಯದಲ್ಲಿ ಕಂಡು ಬಂದ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡು ಇದೀಗ ದಸರಾ ಬಳಿಕ ಮತ್ತೆ ೩೦೦ ನಿವೇಶನಗಳ ಹರಾಜಿಗೆ ಸಿದ್ಧತೆ ನಡೆಸಿದೆ.

ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಎಂಡಿಎ ಆಯುಕ್ತರಾದ ಕೆ.ಆರ್.ರಕ್ಷಿತ್‌ ಹೇಳಿದಿಷ್ಟು..

ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಬಳಿಕ ಕಳೆದ ತಿಂಗಳು ಮೊದಲ ಬಾರಿ ನಿವೇಶನಗಳ ಇ -ಹರಾಜು ನಡೆಸಲಾಯಿತು. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.  ಕೆಲ ನಿವೇಶನಗಳು ಪ್ರಾಧಿಕಾರ ಊಹಿಸದ ಮೊತ್ತಕ್ಕೆ ಬಿಡ್‌ ಆಯಿತು. ಇದರಿಂದ ಪ್ರಾಧಿಕಾರಕ್ಕೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಲು ನೆರವಾಯಿತು. ನಿವೇಶನಗಳ ಬೇಡಿಕೆ ಹಿನ್ನೆಲೆಯಲ್ಲಿ ಈಗ ಮತ್ತೆ ೩೦೦ ನಿವೇಶನಗಳ ”ಇ-ಹರಾಜಿಗೆ” ಸಿದ್ಧತೆ ನಡೆಸಲಾಗುತ್ತಿದೆ. ನಾಡ ಹಬ್ಬ ದಸರಾ ಮಹೋತ್ಸವದ ಮುಗಿದ ಕೂಡಲೇ ನಿವೇಶನಗಳ ಹರಾಜು ಬಗ್ಗೆ ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು.

🔹 ಹರಾಜಿನ ಉದ್ದೇಶ

ಸಾರ್ವಜನಿಕರಿಗೆ ಪಾರದರ್ಶಕವಾಗಿ ನಿವೇಶನ ವಿತರಣೆ ಜತೆಗೆ ಪ್ರಾಧಿಕಾರದ ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ಹಾಗೂ ಅನಧಿಕೃತ ಮಾರಾಟ/ಮಧ್ಯವರ್ತಿಗಳ ಹಸ್ತಕ್ಷೇಪ ತಡೆಯುವುದು.

🔹 ಹರಾಜಿನ ವಿಧಾನ

MDA ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಿರ್ದಿಷ್ಟ ಮೊತ್ತವನ್ನು ಠೇವಣಿ (EMD) ರೂಪದಲ್ಲಿ ಜಮಾ ಮಾಡಬೇಕು. ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಆನ್‌ಲೈನ್ ಮೂಲಕ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಗರಿಷ್ಠ ಮೊತ್ತ ಕೋರಿದವರಿಗೆ ನಿವೇಶನ ಹಂಚಿಕೆ ಆಗುತ್ತದೆ.

🔹 ಮುಖ್ಯ ಅಂಶಗಳು

ಹರಾಜು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆಯ ಮೂಲಕವೇ ನಡೆಯುತ್ತದೆ. ಜತೆಗೆ ನಿವೇಶನಗಳ ವಿವರ, ಗಾತ್ರ, ದರಗಳನ್ನು ಪ್ರಕಟಿಸಲಾಗುತ್ತದೆ. ಯಶಸ್ವಿ ಹರಾಜುದಾರರು ನಿಗದಿತ ಅವಧಿಯಲ್ಲಿ ಹಣ ಪಾವತಿಸಿ  ನಿವೇಶನ ಹಕ್ಕು ಪಡೆಯಬೇಕು.

key words: The Mysore Development Authority, MDA, e-auction, 300 plots, Dasara

vtu

The Mysore Development Authority (MDA), buoyed by the response from the public to its first e-auction, is now preparing to auction another 300 plots after Dasara.

SUMMAERY: 

Mysuru: The Mysuru Urban Development Authority (MDA) has decided to sell residential sites through an e-auction system. The move aims to ensure transparency in site allocation and strengthen the financial resources of the authority.

Interested applicants must register on the official MDA website and deposit the prescribed Earnest Money Deposit (EMD). The e-auction will be conducted on specified dates and times, where participants can bid online. The highest bidder will be allotted the site.

According to officials, the e-auction method is expected to eliminate middlemen and provide direct opportunities to the public.