ಮೈಸೂರು, ಜೂ.11,2025: ಕಳೆದ ಕೆಲ ತಿಂಗಳುಗಳಿಂದ ಹಗರಣಗಳಿಂದಲೇ ಕುಖ್ಯಾತಿ ಹೊಂದಿ ನಿಷ್ಕ್ರೀಯಗೊಂಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಯಾನೆ ಮೈಸೂರು ಅಭಿವೃಧ್ಧಿ ಪ್ರಾಧಿಕಾರ ಇದೀಗ ಮೈಕೊಡವಿಕೊಂಡು ಸಾರ್ವಜನಿಕರ ಸೇವೆಗೆ ಮುಂದಾಗಿದೆ.
ನಾಮ ಪರಿವರ್ತನೆ ಬಳಿಕ ಇದೇ ಮೊದಲ ಬಾರಿಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಸಾರ್ವಜನಿಕರಿಗೆ ಸಿಹಿ ಸುದ್ಧಿ ನೀಡಿದೆ. ಆಷಾಢದ ಬಳಿಕ ಎಂಡಿಎ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ. ಎಂಡಿಎ ನೂತನ ಆಯುಕ್ತ ರಕ್ಷಿತ್ ಈ ಸಂಬಂಧ ಜಸ್ಟ್ ಕನ್ನಡ ಜತೆ ಮಾತನಾಡಿ ಮಾಹಿತಿ ನೀಡಿದರು.
ಮೈಸೂರು ಅಭಿವೃದ್ಧಿ ಪ್ರಾಧಿಕಾರ ಸದ್ಯದಲ್ಲೇ 200 ನಿವೇಶನಗಳನ್ನು ಹರಾಜಿನ ಮೂಲಕ ಹಂಚಲಿದೆ. ಈ ಸಂಬಂಧ ಅಗತ್ಯ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಷಾಢ ಕಳೆದ ಬಳಿಕ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಜತೆಗೆ ಸರಕಾರಿ ಸಂಸ್ಥೆಗಳ ಬಳಕೆ ಉದ್ದೇಶದಿಂದ ಈಗಾಗಲೇ 57 ಸಿಎ ನಿವೇಶನಗಳನ್ನು ಗುರುತಿಸಲಾಗಿದ್ದು, ಸದ್ಯದಲ್ಲೇ ಈ ನಿವೇಶಗಳನ್ನು ಹಂಚಲಾಗುತ್ತದೆ ಎಂದರು.
ಮಾಜಿ ಸೈನಿಕರಿಗೆ ನಿವೇಶನ:
ಒಟ್ಟು 7 ಮಂದಿ ಮಾಜಿ ಸೈನಿಕರಿಗೆ ನಿವೇಶನಗಳನ್ನು ಹಂಚಲು ಎಂಡಿಎ ತೀರ್ಮಾನಿಸಿದ್ದು, ಒಂದೆರೆಡು ವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ನಿವೇಶನ ಪತ್ರಗಳನ್ನು ಸಂಬಂಧಿಸಿದ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದರು.
ಕಾಗದ ರಹಿತ ಕಚೇರಿ:
ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ “ ಇ ಆಫೀಸ್ “ ವ್ಯವಸ್ಥೆ ಅನುಷ್ಠಾನ ಕಡ್ಡಾಯವಾಗಿದೆ. 2021 ರಲ್ಲೇ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರದ ಆದೇಶ ಅನುಷ್ಠಾನಗೊಳಿಸಲು ಮೈಸೂರು ಅಭಿವೃದ್ದಿ ಪ್ರಾಧಿಕಾರ ಸಿದ್ಧವಾಗುತ್ತಿದೆ.
ಆಯುಕ್ತ ಕೆ.ಆರ್.ರಕ್ಷಿತ್ ನೇಮಕಗೊಂಡ ಬಳಿಕ ವಿಶೇಷ ಆಸಕ್ತಿ ವಹಿಸಿ ಸೌಲಭ್ಯ ಕಲ್ಪಿಸಿದ್ದಾರೆ.ಇ ಆಫೀಸ್ ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ತರಬೇತಿ ಆರಂಭವಾಗಿದೆ. ಇ ಆಫೀಸ್ ನೂಡಲ್ ಅಧಿಕಾರಿ ಹಾಗೂ ವಲಯಾಧಿಕಾರಿ ಸಂಪತ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಿಗೆ ತರಬೇತಿ ನಡೆಯುತ್ತಿದೆ.
KEY WORDS: MDA, action 200 sites, ashada, commissioner Rakshith
SUMMARY:
MDA planning to action 200 sites after ashada; commissioner Rakshith
The Mysore Development Authority will soon allocate 200 plots through auction. The necessary process in this regard has been completed and the auction process will be launched after the Ashadha festival. In addition, 57 CA plots have already been identified for the use of government institutions and these plots will be allocated soon.