Saturday, September 12, 2026

BDA Apartments

ಸಾಲದ ಸದುಪಯೋಗ ಪಡೆದುಕೊಳ್ಳುವಂತೆ ಎಂ.ಸಿ.ಡಿ.ಸಿ.ಸಿ.ಅಧ್ಯಕ್ಷರ ಜಿ.ಡಿ.ಹರೀಶ್ ಗೌ...
Home Front Page ಸಾಲದ ಸದುಪಯೋಗ ಪಡೆದುಕೊಳ್ಳುವಂತೆ ಎಂ.ಸಿ.ಡಿ.ಸಿ.ಸಿ.ಅಧ್ಯಕ್ಷರ ಜಿ.ಡಿ.ಹರೀಶ್ ಗೌಡ ಕರೆ.

ಸಾಲದ ಸದುಪಯೋಗ ಪಡೆದುಕೊಳ್ಳುವಂತೆ ಎಂ.ಸಿ.ಡಿ.ಸಿ.ಸಿ.ಅಧ್ಯಕ್ಷರ ಜಿ.ಡಿ.ಹರೀಶ್ ಗೌಡ ಕರೆ.

 

ಮೈಸೂರು,ಏಪ್ರಿಲ್,5,2021(www.justkannada.in):  ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕ್ ನಿಂದ ಪಡೆದ ಸಾಲವನ್ನು ಸದುಪಯೋಗ ಪಡಿಸಿಕೊಂಡು ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಳ್ಳುವಂತೆ ಎಂ.ಸಿ.ಡಿ ಸಿ.ಸಿ.ಬ್ಯಾಂಕ್ ಅಧ್ಯಕ್ಷರು, ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ ಕರೆ ನೀಡಿದರು.
ಅವರು ಇಂದು ಎಂ.ಸಿ.ಡಿ.ಸಿ.ಸಿ.ಬ್ಯಾಂಕ್ ನ ಜನತಾನಗರ ಶಾಖೆವತಿಯಿಂದ ಕಾಯಕ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಕ್ಕೆ ವಿತರಿಸಿ ಮಾತನಾಡಿದರು.

ಜನತಾನಗರ ಹಾಗೂ ದಟ್ಟಗಳ್ಳಿಯ ಸಿರಿ,ದೃಷ್ಟಿ ಮಹಿಳಾ ಸ್ವ ಸಹಾಯ ಸಂಘಕ್ಕೆ ತಲಾ 10 ಲಕ್ಷ ರೂ ಸಾಲ ವಿತರಣೆ ಹಾಗೂ ಚಾಮುಂಡೇಶ್ವರಿ, ಧನಲಕ್ಷ್ಮಿ, ಶ್ರೀ ಬಾಲಗಂಗಾಧರನಾಥಸ್ವಾಮಿ ಮಹಿಳಾ ಸ್ವಸಹಾಯ ಸಂಘಗಳಿಗೆ ಒಟ್ಟು 7 ಲಕ್ಷ ರೂ ಲಿಂಕೇಜ್ ಸಾಲ ವಿತರಣೆ ಮಾಡಿದರು.
ಬ್ಯಾಂಕ್ ನ ಎಂ.ಡಿ. ಜನಾರ್ಧನ್, ಜಿ.ಎಂ.ಶಧಿಧರ್ ಶಾಖಾ ವ್ಯವಸ್ಥಾಪಕರಾದ ರಮೇಶ್, ಮೇಲ್ವಿಚಾರಕರಾದ ಸತೀಶ್ ಉಪಸ್ಥಿತರಿದ್ದರು.