ಮಾರಿಷಸ್‌ ನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಎಂಬಿಬಿಎಸ್ ಕೋರ್ಸ್‌ ಆರಂಭ

ಮಾರಿಷಸ್ / ಮೈಸೂರು, ಅಕ್ಟೋಬರ್ ,13,2025 (www.justkannada.in):  ಜೆಎಸ್‌ಎಸ್ ಮಹಾವಿದ್ಯಾಪೀಠವು ಶೈಕ್ಷಣಿಕ ಕ್ಷೇತ್ರದ ಸೇವೆಯನ್ನು ಭಾರತದಾಚೆಗೆ ದುಬೈ, ಮಾರಿಷಸ್ ಮತ್ತು ಅಮೆರಿಕದವರೆಗೆ ಯಶಸ್ವಿಯಾಗಿ ವಿಸ್ತರಿಸಿದೆ.

ಮಾರಿಷಸ್ ದೇಶದ ವಕೋಯಾಸ್ ಉಪನಗರದ ಬೋನ್‌ ಟೇರ್‌ ನಲ್ಲಿ ಎಂಟು ಎಕರೆಯಷ್ಟು ವಿಶಾಲ ಪ್ರದೇಶದ ಕ್ಯಾಂಪಸ್‌ನಲ್ಲಿ 14,689 ಚ.ಮೀ. ವಿಸ್ತೀರ್ಣದಲ್ಲಿ ಅಕಾಡೆಮಿಯ ಕಟ್ಟಡವನ್ನು ನಿರ್ಮಿಸಲಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ತರಗತಿಗಳು, ಪ್ರಯೋಗಾಲಯಗಳು, ವರ್ಕ್‌ ಶಾಪ್‌ಗಳು ಮತ್ತು ವಸತಿ ಸೌಲಭ್ಯಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಂಕಲ್ಪ ಮತ್ತು ದೂರದೃಷ್ಟಿಯ ಮಾರ್ಗದರ್ಶನದಿಂದ ಮಾರಿಷಸ್‌ನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಎಂಬಿಬಿಎಸ್ ಕೋರ್ಸ್‌ನ್ನು ಪ್ರಾರಂಭಿಸಲು ಅಲ್ಲಿನ ಸರ್ಕಾರದ ಹೈಯರ್ ಎಜುಕೇಶನ್ ಕಮಿಷನ್‌ನಿಂದ ಅಂಗೀಕಾರ ದೊರೆತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಂತಾಗಿದೆ. ದೇಶವಿದೇಶಗಳಲ್ಲಿ 360ಕ್ಕೂ ಹೆಚ್ಚು ಶಿಕ್ಷಣಸಂಸ್ಥೆಗಳನ್ನು ನಡೆಸುತ್ತಿರುವ ಮಹಾವಿದ್ಯಾಪೀಠವು ಗುಣಮಟ್ಟ, ಕೈಗೆಟುಕುವ ಮತ್ತು ಜಾಗತಿಕವಾಗಿ ಪ್ರಸ್ತುತವಾಗಿರುವ ಉನ್ನತ ಶಿಕ್ಷಣವನ್ನು ಭಾರತದಾಚೆಗೂ ವಿಸ್ತರಿಸುವ ಧೈಯವನ್ನು ಈ ಮೂಲಕ ಮತ್ತೊಮ್ಮೆ ಸಾಕಾರಗೊಳಿಸುತ್ತಿದೆ.

Key words: MBBS Course, JSS, Higher Education and Research Academy , Mauritius