ಐದು ವರ್ಷವೂ ಸಿದ್ಧರಾಮಯ್ಯ ಸಿಎಂ ಹೇಳಿಕೆ  ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಎಂ.ಬಿ ಪಾಟೀಲ್.

ಬೆಂಗಳೂರು,ಮೇ,23,2023(www.justkannada.in): ಐದು ವರ್ಷ ಸಿದ‍್ಧರಾಮಯ್ಯ ಸಿಎಂ ಹೇಳಿಕೆ ಕುರಿತು ಸಚಿವ ಎಂ.ಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಸಿದ್ಧರಾಮಯ್ಯ 5 ವರ್ಷವೂ ಸಿಎಂ  ಆಗಿರುತ್ತಾರೆ ಎಂದು ವರಿಷ್ಠರು ಹೇಳಿದ್ದನ್ನೇ ನಾನು ಹೇಳಿದ್ದೇನೆ.  ವೇಣುಗೋಪಾಲ್ ಏನು ಹೇಳಿದ್ದಾರೋ ಅದನ್ನೇ ನಾನು ಹೇಳಿದ್ದೆ . ಅದಿಕಾರ ಹಂಚಿಕೆ ಸೂತ್ರದ ಬಗ್ಗೆ ನನಗೆ ಗೊತ್ತಿಲ್ಲ. ವೇಣುಗೋಪಾಲ್ ಪವರ್ ಶೇರಿಂಗ್ ಇಲ್ಲ ಎಂದಿದ್ರು. ಪವರ್ ಶೇರಿಂಗ್ ಇದ್ದರೆ ಅದು ಜನರ ಜೊತೆ ಮಾತ್ರ ಎಂದಿದ್ದರು.  ನಾನು ವೈಯಕ್ತಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ ಎಂದು ತಿಳಿಸಿದರು.

ಖಾತೆ ಹಂಚಿಕೆ ವಿಚಾರ  ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಸಿಎಂ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು ಎಂದು ಎಂ.ಬಿ ಪಾಟೀಲ್ ತಿಳಿಸಿದರು.

Key words: Minister -MB Patil- clarified – statement –CM- Siddaramaiah – five years.