ಮೇಯರ್ ಹಾಗೂ ಉಪ ಮೇಯರ್ ಗೆ ನಾನು ಯಾವ ಲಾಬಿ ಮಾಡಿಲ್ಲ- ಶಾಸಕ ರಾಮದಾಸ್.

ಮೈಸೂರು,ಆಗಸ್ಟ್,26,2022(www.justkannada.in):  ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ದಿನಾಂಕ ನಿಗದಿ ಹಿನ್ನಲೆ,  ನಾನು ಮೇಯರ್ ಹಾಗೂ ಉಪ ಮೇಯರ್ ಗೆ ಯಾವ ಲಾಬಿ ಮಾಡಿಲ್ಲ ಎಂದು ಶಾಸಕ ಎಸ್ .ಎ ರಾಮದಾಸ್ ತಿಳಿಸಿದರು.

ಮೈಸೂರಿನಲ್ಲಿ ಮಾತನಾಡಿದ  ಬಿಜೆಪಿ ಶಾಸಕ ರಾಮದಾಸ್ , ಕಳೆದ ಬಾರಿ ಮೈಸೂರು ಉಸ್ತುವಾರಿ ಸಚಿವರು ಜವಬ್ದಾರಿಯುತವಾಗಿ ನಿಭಾಯಿಸಿದ್ದರು. ಮೈಸೂರು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ಜವಾಬ್ದಾರಿ ಇದೆ ಅವರೇ ಮಾಡ್ತಾರೆ. ಮೇಯರ್ ಹಾಗೂ ಉಪ ಮೇಯರ್ ಗೆ ನಾನು ಯಾವ ಲಾಬಿ ಮಾಡಿಲ್ಲ. ಜೀವನದಲ್ಲಿ ಪಕ್ಷಕ್ಕೆ ಸೇರಿದ ಸಂದರ್ಭದಿಂದ ನಾನು ಮಂತ್ರಿ ಮಾಡಿ ಅಂತಾ  ಬೇಡಿಕೆ ಇಟ್ಟಿಲ್ಲ. ನಾನು ಕ್ಷೇತ್ರದ ಜನರ ಋಣ ತಿರಿಸೋದೇ ನನ್ನ ಜವಾಬ್ದಾರಿ ಎಂದು ತಿಳಿಸಿದರು.

40% ಕಮಿಷನ್  ವಿಚಾರದ ಬಗ್ಗೆ ಅವರನ್ನೇ  ಕೇಳಬೇಕು. ನಮ್ಮ ಅಪ್ಪ ಮಿಲ್ಟರಿ ಆಫೀಸರ್. ನಮ್ಮ ದೇಹದಲ್ಲಿ ಹರಿಯುತ್ತಿರುವ  ರಕ್ತ ಶುದ್ದವಾದದ್ದು. ನಮ್ಮ ಅಮ್ಮ ಯಾವಾಗಲೂ ಹೇಳುತ್ತಿದ್ದರು ನೋಡು ಮಗಾ ರಾಜಕಾರಣ ಅನ್ನೋದು ಬಹಳ ಕಷ್ಟ. ನಿನ್ನ ಕೈಗೆ  ಕೆಸರು ಆಗುತ್ತೆ  ಅನ್ನೋದಾದರೆ,ರಾಜಕೀಯ ಬಿಟ್ಟುಬಿಡು ಅಂಥ ಹೇಳ್ತಿದ್ರು ಹಾಗಾಗಿ ನಾನು ಶುದ್ಧವಾಗಿದ್ದೇನೆ ಎಂದರು.

Key words:  mayor – deputy mayor-election-MLA-SA Ramdas.