ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ

ಬೆಂಗಳೂರು, ಡಿಸೆಂಬರ್ 11, 2021 (www.justkannada.in): ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿಗೆ ಇಂದು 4ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ.

ಅಂದಹಾಗೆ ಅಭಿಮಾನಿಗಳು ಮೆಚ್ಚಿ ಹರಸಿದ್ದ ವಿರುಷ್ಕಾ ಜೋಡಿ 2017 ಡಿಸೆಂಬರ್ 11ರಂದು ಇಟಲಿಯಲ್ಲಿ ಮದುವೆಯಾಗಿದ್ದರು.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ವಿವಾಹ ಜೀವನಕ್ಕೆ ಕಾಲಿರಿಸಿ ಇಂದಿಗೆ ನಾಲ್ಕು ವರುಷ ಕಳೆದಿದ್ದು, ಜೋಡಿ ಈ ಸಂಭ್ರಮವನ್ನು ಆಚರಿಸುತ್ತಿದ್ದಾರೆ.

ಜಾಹೀರಾತಿನ ಚಿತ್ರೀಕರಣವೊಂದರಲ್ಲಿ ಭೇಟಿಯಾಗಿ ಕೆಲವು ವರ್ಷಗಳ ಕಾಲ ಪ್ರೀತಿಯಲ್ಲಿ ಮುಳುಗಿದ್ದ ಕೊಯ್ಲಿ-ಅನುಷ್ಕಾ ಜೋಡಿಯಾಗಿ ಜೀವಿಸಲು ನಿರ್ಧರಿಸಿ ಸಪ್ತಪದಿ ತುಳಿದಿದ್ದರು.