ಮಾರ್ಚ್ 12, 13, 14 ರಂದು ಸಾಹಿತಿ ಎಸ್ಎ.ಲ್.ಭೈರಪ್ಪರ ಪರ್ವ ಕಾದಂಬರಿಯ ನಾಟಕ ಪ್ರದರ್ಶನ 

ಮೈಸೂರು,ಮಾರ್ಚ್,10,2021(www.justkannada.in) : ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪರ ಪರ್ವ ಕಾದಂಬರಿಯ ನಾಟಕ ಮಾರ್ಚ್ 12, 13, 14 ರಂದು ಪ್ರದರ್ಶನವಾಗಲಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು. jkರಂಗಾಯಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕಲಾಮಂದಿರದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ನಾಟಕಕ್ಕೆ ಸಾಹಿತಿ ಎಸ್.ಎಲ್.ಭೈರಪ್ಪ ಚಾಲನೆ ನೀಡಲಿದ್ದು, ಪರ್ವ ಕಾದಂಬರಿಯ ರಂಗರೂಪ ಮತ್ತು 7ಗಂಟೆ 30 ನಿಮಿಷಗಳ ನಾಟಕ ಪ್ರದರ್ಶನವಾಗಿದೆ. ವಿಶೇಷ ಯೋಜನೆಯ ಅನುಷ್ಠಾನಕ್ಕಾಗಿ ರಂಗಾಯಣ 12 ಹಿರಿಯ ಕಲಾವಿದರ ಜೊತೆಗೆ 25 ಮಂದಿ ಕಲಾವಿದರು 10 ತಂತ್ರಜ್ಞರ ಆಯ್ಕೆ ಮಾಡಿದೆ ಎಂದಿದ್ದಾರೆ.

ಕಳೆದ ಆರು ತಿಂಗಳಿನಿಂದ ಸತತವಾಗಿ ತಾಲೀಮು ನಡೆಸಲಾಗುತ್ತಿದೆ. ಇದೀಗ 12ರಂದು ನಾಟಕ ಪ್ರದರ್ಶನವಾಗುತ್ತಿದೆ. ಕಲಾಮಂದಿರದಲ್ಲಿ ಪ್ರದರ್ಶನ ನಡೆಯಲಿದ್ದು 10ಕ್ಕೆ ನಾಟಕ ಆರಂಭವಾಗಿ 6.30 ಕ್ಕೆ ಮುಗಿಯಲಿದೆ. ರಂಗಮಂದಿರದ 2 ಕಡೆಗಳಲ್ಲಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ, ೭೦% ಟಿಕೆಟ್ ಸೇಲ್ ಆಗಿದೆ ಎಂದು ಮಾಹಿತಿ ನೀಡಿದರು.

 

budget,Rangayana,Name,Proposal,whole,Kannada-art,Given,Large,Honor,Rangayana,Director,addanda,karyappa 

ಸುದ್ದಿಗೋಷ್ಠಿಯಲ್ಲಿ ಪರ್ವ ನಿರ್ದೇಶಕ ಪ್ರಕಾಶ್ ಬೆಳವಾಡಿ, ರಂಗಾಯಣ ಜಂಟಿ ಉಪ ನಿರ್ದೇಶಕರ ಉಪಸ್ಥಿತಿ.

key words : March-12, 13, 14-Literature-writer-S.L.Bhairappara-Parva-novel-Theatrical-performance