ದೀಪಾವಳಿ ಬಳಿಕ ಹಲವು ನಾಯಕರು ಜೆಡಿಎಸ್ ಸೇರಲಿದ್ದಾರೆ- ಸಿಎಂ ಇಬ್ರಾಹಿಂ.

ರಾಮನಗರ,ಅಕ್ಟೋಬರ್,22,2022(www.justkannada.in): ದೀಪಾವಳಿ ಬಳಿಕ ಹಲವು ನಾಯಕರು ಜೆಡಿಎಸ್ ಸೇರಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ  ಸಿಎಂ ಇಬ್ರಾಹಿಂ ತಿಳಿಸಿದರು.

ರಾಮನಗರದಲ್ಲಿ ಇಂದು ಮಾತನಾಡಿದ ಸಿಎಂ ಇಬ್ರಾಹಿಂ, ಜೆಡಿಎಸ್ ಸೇರಲು ಹಲವು ನಾಯಕರು ಕಾದುಕುಳಿತಿದ್ದಾರೆ. ಪಕ್ಷ ಬಿಟ್ಟವರನ್ನ ಮತ್ತೆ ಸೇರಿಸಿಕೊಳ್ಳುವ ಬಗ್ಗೆ ಹೆಚ್.ಡಿ ದೇವೇಗೌಡರು ನಿರ್ಧರಿಸುತ್ತಾರೆ.  ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದರು.

ಚನ್ನಪಟ್ಟಣದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಗೆಲ್ಲಿಸುವ ಜವಾಬ್ದಾರಿ ನಮ್ಮದು. ಚನ್ನಪಟ್ಟಣದಲ್ಲಿ ಹೆಚ್.ಡಿ  ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿ ಹೋದರೇ ಸಾಕು ಎಂದು ಸಿಎಂ ಇಬ್ರಾಹಿಂ ನುಡಿದರು.

Key words: Many leaders –will- join -JDS -after –Diwali-CM Ibrahim