ಸದನದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದೆ- ವಿಶ್ವಾಸಮತಯಾಚನೆ ಪ್ರಸ್ತಾವ ಬಳಿಕ ವಿಧಾನಸಭೆಯಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ

ಬೆಂಗಳೂರು,ಜು,18,2019(www.justkannada.in): ಜಿಂದಾಲ್ ವಿಚಾರ, ಸುಪ್ರೀಂಕೋರ್ಟ್ ತೀರ್ಪು, ಐಎಂಎ ವಂಚನೆ ಪ್ರಕರಣ ಸೇರಿ ಹಲವು ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕಿದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ವಿಧಾನಸಭೆ ಕಲಾಪ ಆರಂಭವಾಗುತ್ತಿದಂತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಪ್ರಸ್ತಾವ ಮಂಡಿಸಿದರು. ಬಳಿಕ ವಿಶ್ವಾಸ ಮತಯಾಚನೆ ಮೇಲೆ ಭಾಷಣ ಮಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಬಿಎಸ್ ಯಡಿಯೂರಪ್ಪ ತುಂಬಾ ಆತುರದಲ್ಲಿದ್ದಾರೆ.  ವಿಶ್ವಾಸಮತಯಾಚನೆ ಯಾವ ಕಾರಣಕ್ಕೆ ಬಂದಿದೆ. ಈ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಶಾಸಕರು ಅಪನಂಬಿಕೆಯಿಂದ ಸುಪ್ರೀಂ ಮೆಟ್ಟಿಲೇರಿದ್ದಾರೆ ಶಾಸಕರು ನಿಮ್ಮ ಮುಂದೆಯೇ ರಾಜೀನಾಮೆ ನೀಡಿದ್ದಾರೆ.  ಈ ಹಿಂದೆ ನಡೆದ ಬೆಳವಣಿಗೆ ಬಗ್ಗೆ ತಿಳಿಸಿದ್ದಾರೆ. ಇದೆಲ್ಲದರ ಬಗ್ಗೆ ಚರ್ಚೆಯಾಗಬೇಕು ಎಂದರು.

14 ತಿಂಗಳಲ್ಲಿ ಏನೇನು ಆಗಿದೆ ಎಂಬುದನ್ನ ಚರ್ಚೆ ಮಾಡಬೇಕು. ಸರ್ಕಾರ ಅಸ್ಥಿರ ಗೊಳಿಸುವ ಯತ್ನದ ಬಗ್ಗೆ ಚರ್ಚಿಸಬೇಕು  ಎಲ್ಲಾ ವಿಚಾರಗಳ ಬಗ್ಗೆ ಇಂದು ಸ್ಪಷ್ಟನೆ ಸಿಗಬೇಕು. ಸಮ್ಮಿಶ್ರ ಸರ್ಕಾರ ಹಲವು ಸಮಸ್ಯೆಗಳನ್ನ ನಮ್ಮ ಮುಂದಿದ್ದವು. ಅವುಗಳನ್ನ ಎದುರಿಸಲು ಏನು ಮಾಡಿದವು . ಬರಗಾಲ ಕೊಡಗು ಪ್ರವಾಹ ವೇಳೇ ಏನು ಮಾಡಿದ್ದೇನೆ. ಎಂಬ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಮನವಿ ಮಾಡಿದರು.

ಹಾಗೆಯೇ ಜಿಂದಾಲ್ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಜಿಂದಾಲ್ ಪ್ರಕರಣವೇನು ಅದರ ಬಗ್ಗೆ ಜನರಲ್ಲಿ ಮಾಹಿತಿ ನೀಡಬೇಕು. ಈ ಬಗ್ಗೆ ಜನರಲ್ಲಿ ಹಲವು ಅನುಮಾನಗಳನ್ನ ಹುಟ್ಟು ಹಾಕಿದ್ದಾರೆ. ಕಳೆದ ಮೂರು ನಾಲ್ಕು ತಿಂಗಳಲ್ಲಿ ಪ್ರತಿಕ್ರಿಯೆ ನೀಡಿಲ್ಲ. ಸರ್ಕಾರದ ಕಾರ್ಯಕ್ರಮ ಅನುಷ್ಟಾನದ ಬಗ್ಗೆ ಮಾಹಿತಿ ನೀಡಿಲ್ಲ  ಹೀಗಾಗಿ  ಜನರಿಗೆ ಈ ಮಾಹಿತಿ ಇಲ್ಲಿ ನೀಡಬೇಕು.  ಐಎಂಎ ಪ್ರಕರಣದ ಬಗ್ಗೆ ಚರ್ಚೆ ಮಾಡಬೇಕು ಎಲ್ಲಾ ಪ್ರಕರಣದ ಬಗ್ಗೆ ನಾನು ಚರ್ಚೆ ಮಾಡಬೇಕು.

ಇನ್ನು ಪ್ರಧಾನಿ ಮೋದಿ  ರಾಜ್ಯಕ್ಕೆ ಬಂದಾಗ ಸಮ್ಮಿಶ್ರ ಸರ್ಕಾರದ ವಿರುದ್ದ ಹಲವು ಆರೋಪಗಳನ್ನ ಮಾಡಿದರು. ಆ ಭಾಷಣ ದಮಾಹಿತಿ ಇಟ್ಟುಕೊಂಡಿದ್ದೇನೆ. ಕಲಬೆರಿಕೆಯಲ್ಲ ಬಲಿಷ್ಠ ಸರ್ಕಾರ ಬೇಕು ಎಂದಿದ್ದಾರೆ. ತಲೆ ಒಡೆಯುವ ಸರ್ಕಾರ ಬೇಕಾ ಎಂದು ಮೋದಿ ಹೇಳಿದ್ದಾರೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಸ್ತಾಪಿಸಿದರು.

Key words: many issues – discussed –session-CM HD Kumaraswamy -Assembly