ಮಲೆಯಾಳಂ ಸಿನಿಮಾ ʼ ಮಂಜುಮ್ಮೆಲ್ ಬಾಯ್ಸ್ ʼ ದಾಖಲೆ ಗಳಿಕೆ..!

Manjummel Boys ̲ become the highest-grossing ̲  Malayalam film ̲ at the Indian box office ̧

 

ಬೆಂಗಳೂರು, ಮಾ.೦೬, ೨೦೨೪ : ಮಲೆಯಾಳಂನ  ʼ ಮಂಜುಮ್ಮೆಲ್ ಬಾಯ್ಸ್ ʼ ಈಗ ಭಾರತೀಯ ಚಿತ್ರರಂಗದಲ್ಲಿ ­­ಅತಿ ಹೆಚ್ಚು ಹಣಗಳಿಕೆ ಮಾಡಿದ ಸಿನಿಮ ಎಂಬ ಗರಿಮೆಗೆ ಪಾತ್ರವಾಗಿದೆ.

ಈ ತನಕ ದೇಶದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಮಲಯಾಳಂ ಚಲನಚಿತ್ರದ ದಾಖಲೆಯನ್ನು  ʼ ೨೦೧೮ ʼ ಮಲೆಯಾಳಂ ಸಿನಿಮಾ ಹೊಂದಿದೆ. ಎರಡು ವಾರದಲ್ಲಿ  ರೂ. 107 ಕೋಟಿ ಸಂಗ್ರಹದ ದಾಖಲೆ. ಆದರೆ, ಈಗ ಮಂಜುಮ್ಮೆಲ್ ಬಾಯ್ಸ್ ಇದನ್ನು ಮೀರಿ ಅಂತಿಮವಾಗಿ  125 ಕೋಟಿ ರೂ. ಸಂಗ್ರಹಿಸಿದೆ ಎನ್ನಲಾಗಿದೆ.

ಮಂಜುಮ್ಮೆಲ್ ಬಾಯ್ಸ್  ನಿನ್ನೆ ಗಳಿಕೆ ಸುಮಾರು 5.50 ಕೋಟಿ ರೂ. ಇದು 2 ನೇ ಶುಕ್ರವಾರಕ್ಕಿಂತ 15 ಶೇಕಡಾ ಹೆಚ್ಚಾಗಿದೆ. ಇದು ತಮಿಳುನಾಡು ಮತ್ತು ಕರ್ನಾಟಕದಿಂದ ಬಂದ ಅಂಕಿಅಂಶ.  ಏತನ್ಮಧ್ಯೆ, ಕೇರಳದಲ್ಲಿ ಸಿನಿಮಾದ ಬಳಿಕೆ ಅತ್ಯಂತ ಹೆಚ್ಚಾಗಿಯೇ ಇದೆ.

ಬಾಕ್ಸ್ ಆಫೀಸ್‌ನಲ್ಲಿ ಮಂಜುಮ್ಮೆಲ್ ಬಾಯ್ಸ್‌

ಒಂದು ವಾರರೂ. 32 ಕೋಟಿ (8 ದಿನಗಳು)

2 ನೇ ಶುಕ್ರವಾರ – ರೂ. 4.75 ಕೋಟಿ

2ನೇ ಶನಿವಾರ – ರೂ. 9 ಕೋಟಿ

2ನೇ ಭಾನುವಾರ – ರೂ. 11.25 ಕೋಟಿ

2 ನೇ ಸೋಮವಾರ – ರೂ. 5.50 ಕೋಟಿ

ಒಟ್ಟುರೂ. 62.50 ಕೋಟಿ

ಇತರ ಮಾನದಂಡಗಳ ಪೈಕಿ, ಚಿತ್ರವು ನಿನ್ನೆ ಜಾಗತಿಕವಾಗಿ 100 ಕೋಟಿ ರೂ. ಗಳಿಸಿದ್ದು, ಇದು ಶತಕ ಬಾರಿಸಿದ ನಾಲ್ಕನೇ ಮಲಯಾಳಂ ಚಿತ್ರವಾಗಿದೆ.

ಮಾಲಿವುಡ್‌ನ ಜಾಗತಿಕ ಚಾಂಪಿಯನ್  2018, ಸಿನಿಮಾ ರೂ. 177 ಕೋಟಿ ರೂ. ತಲುಪಿತ್ತು. ಈಗ ಮಂಜುಮ್ಮೆಲ್ ಬಾಯ್ಸ್ ಅದನ್ನು ಹಿಂದಿಕ್ಕುವ ಲಕ್ಷಣ ತೋರಿದೆ.

ಕೃಪೆ : ಇಂಟಿಯಾ ಟುಡೆ

Key words : Manjummel Boys ̲ become the highest-grossing ̲  Malayalam film ̲ at the Indian box office ̧