ರಾಬರ್ಟ್ ಮೆಚ್ಚಿ ಹೊಗಳಿದ ಮಾತಾ ಬಿ. ಮಂಜಮ್ಮ ಜೋಗತಿ

ಬೆಂಗಳೂರು, ಮಾರ್ಚ್ 26, 2021 (www.justkannada.in): 

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಅಕಾಡೆಮಿ ಅಧ್ಯಕ್ಷೆ ಹಾಗೂ ಮಂಗಳಮುಖಿ ಮಾತಾ ಬಿ. ಮಂಜಮ್ಮ ಜೋಗತಿ ರಾಬರ್ಟ್​ ಚಿತ್ರದ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಸಿನಿಮಾದಲ್ಲಿ ಮಂಗಳಮುಖಿಯರೂ ನಮ್ಮಂತೆ ಸಮಾಜದಲ್ಲಿ ಒಬ್ಬರು ಎಂಬುದನ್ನು ತೋರಿಸುವ ಕೆಲಸ ಮಾಡಲಾಗಿದೆ. ಇದಕ್ಕೆ ಮಂಜಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಬರ್ಟ್​ ಸಿನಿಮಾ ತೆರೆಕಂಡ ತುಂಬಾ ಜನರು ನನಗೆ ಕರೆ ಮಾಡಿ ಸಿನಿಮಾ ನೋಡಿ ಎಂದಿದ್ದರು. ಚಿತ್ರ ನೋಡಿದ ಬಳಿಕ ಅದು ಏಕೆ ಎಂಬುದು ನನಗೆ ತಿಳಿಯಿತು ಎಂದು ಮಂಜಮ್ಮ ಜೋಗತಿ ತಿಳಿಸಿದ್ದಾರೆ.