Sunday, August 23, 2026

BDA Apartments

Home Front Page ಮಾರ್ಚ್ 10ಕ್ಕೆ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ

ಮಾರ್ಚ್ 10ಕ್ಕೆ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ

ಬೆಂಗಳೂರು, ಮಾರ್ಚ್ 04, 2023 (www.justkannada.in): ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ನಗರದ ನ್ಯಾಯಾಲಯವು ಮಾರ್ಚ್ .10ಕ್ಕೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಭಾನುವಾರ ರಾತ್ರಿ ಸಿಸೋಡಿಯಾ ಅವರನ್ನು ಕೇಂದ್ರೀಯ ತನಿಖಾ ದಳ ಬಂಧಿಸಿದೆ.

ಜಾರಿ ನಿರ್ದೇಶನಾಲಯ ಮೂಲಗಳು ಸಿಸೋಡಿಯಾ ಅವರ ಕಸ್ಟಡಿಯನ್ನು ವಿಸ್ತರಿಸಲು ಕಾನೂನು ಜಾರಿ ಸಂಸ್ಥೆ ಕೋರುವ ಸಾಧ್ಯತೆಯಿದೆ ಎನ್ನಲಾಗಿದೆ.

ಆದರೆ ಯಾವಾಗ ಕರೆದರೂ ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹಾಜರಾಗುವುದಾಗಿ ಸಿಸೋಡಿಯಾ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.