“ಮ್ಯಾನ್ ಹೋಲ್ ಗೆ ಕಾರ್ಮಿಕರನ್ನ ಇಳಿಸಿದರೆ, ಗಂಭೀರ ಕ್ರಮ” : ಹೈಕೋರ್ಟ್ ಎಚ್ಚರಿಕೆ

ಬೆಂಗಳೂರು,ಜನವರಿ,03,2021(www.justknnada.in) : ಮ್ಯಾನ್ ಹೋಲ್ ಗೆ ಕಾರ್ಮಿಕರನ್ನು ಇಳಿಸಿದರೆ, ಗಂಭೀರ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.jk

ಕಲಬುರ್ಗಿಯಲ್ಲಿ ಮ್ಯಾನ್ ಹೋಲ್ ಗೆ ಇಳಿದ ಮೂವರು ಕಾರ್ಮಿಕರ ಪೈಕಿ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದು, ಓರ್ವ ಕಾರ್ಮಿಕ ಸ್ಥಿತಿ ಗಂಭೀರವಾಗಿದ್ದು, ಈ ಪ್ರಕರಣವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಮ್ಯಾನ್ ಹೋಲ್ ಗಳ ಸ್ವಚ್ಛತಾ ಕಾರ್ಯಕ್ಕೆ ಕಾರ್ಮಿಕರನ್ನು ಬಳಕೆ ಮಾಡುವುದಕ್ಕೆ ನಿಷೇಧವಿದೆ. ಹೀಗಾಗಿಯೂ, ಇಂತಹ ಘಟನೆ ಮರುಕಳಿಸುತ್ತಿರುವುದು ಆಘಾತಕಾರಿ ಎಂದು ಆತಂಕ ವ್ಯಕ್ತಪಡಿಸಿದೆ.

“ರಾಜ್ಯ ಸರ್ಕಾರ ಹೈಕೋರ್ಟ್ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ”manhole-Workers-unloaded-Serious-action-High Court-Warningರಾಜ್ಯ ಸರ್ಕಾರ ಹೈಕೋರ್ಟ್ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ. ಆದೇಶ ಪಾಲಿಸದಿದ್ದರೇ ಗಂಭೀರ ಕ್ರಮ ಕೈಗೊಂಡು, ನ್ಯಾಯಾಂಗ ನಿಂದನೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿತು.

key words : manhole-Workers-unloaded-Serious-action-High Court-Warning