Sunday, September 20, 2026

BDA Apartments

ಖಾಸಗಿ ಬಸ್ ಗೆ ಮರಳು ಸಾಗಿಸುತ್ತಿದ್ದ ಲಾರಿ ಡಿಕ್ಕಿ… BDA JK_Adv BDA Adv
Home Crime ಖಾಸಗಿ ಬಸ್ ಗೆ ಮರಳು ಸಾಗಿಸುತ್ತಿದ್ದ ಲಾರಿ ಡಿಕ್ಕಿ…

ಖಾಸಗಿ ಬಸ್ ಗೆ ಮರಳು ಸಾಗಿಸುತ್ತಿದ್ದ ಲಾರಿ ಡಿಕ್ಕಿ…

ಮಂಗಳೂರು,ಸೆ,19,2019(www.justkannada.in): ಮರಳು ಸಾಗಿಸುತ್ತಿದ್ದ ಲಾರಿ ಖಾಸಗಿ ಬಸ್ ಗೆ ಢಿಕ್ಕಿಹೊಡೆದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಕಲ್ಕಟ್ಟ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ‌ .ಘಟನೆಯಲ್ಲಿ ಬಸ್ ನಲ್ಲಿದ್ದವರು ಅಲ್ಪ ಗಾಯಗೊಂಡಿದ್ದು, ಕೆಲಕಾಲ ರಸ್ತೆ ಸಂಚಾರ ಅಡ್ಡಿಯಾಗಿದೆ.

ತೌಡುಗೋಳಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಗೆ ವಿರುದ್ದ ದಿಕ್ಕಿನಿಂದ ಹರೇಕಳ ಕಡೆಯಿಂದ  ಕೇರಳ ಕಡೆಗೆ ಮರಳು ಸಾಗಾಟ ನಡೆಸುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಬೆಳಗ್ಗಿನ ಸಮಯವಾಗಿದ್ದರಿಂದಾಗಿ ಬಸ್ಸಿನಲ್ಲಿ ಪ್ರಯಾಣಿಕರು ಹೆಚ್ಚಿದ್ದು, ವಿದ್ಯಾರ್ಥಿಗಳು ಇದ್ದರು. ಸದ್ಯ ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ.  ಚಾಲಕ ಹಾಗೂ ಮುಂಬದಿ ಸೀಟಿನಲ್ಲಿದ್ದ ಪ್ರಯಾಣಿಕರಿಬ್ಬರಿಗೆ ಅಲ್ಪ ಗಾಯಗಳಾಗಿವೆ.

ಘಟನೆಯಿಂದಾಗಿ ನಾಟೆಕಲ್ ಮಂಜನಾಡಿ ರಸ್ತೆಯಲ್ಲಿ ಅರ್ಧ ಗಂಟೆಯ ಕಾಲ ರಸ್ತೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.  ಘಟನಾ ಸ್ಥಳಕ್ಕೆ ಮಂಗಳೂರು ಸಂಚಾರಿ ಪೊಲೀಸರು ಹಾಗೂ ಕೊಣಾಜೆ ಪೊಲೀಸರು ಆಗಮಿಸಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮರಳು ಲಾರಿಗಳ ಚಾಲನೆಯಿಂದ ಈ ಭಾಗದಲ್ಲಿ ಹಲವು ಅಪಘಾತಗಳು ಸಂಭವಿಸುತ್ತಲೇ ಇದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಅನ್ನುವ ಆಗ್ರಹ ಸಾರ್ವಜನಿಕರಿಂದ ಕೇಳಿಬಂತು.

Key words: mangalore-lorry- collided – private bus.