ಮಂಗಳೂರು ಮಹಾನಗರ  ಪಾಲಿಕೆ ನೂತನ ಮೇಯರ್ ಆಗಿ ಬಿಜೆಪಿ ದಿವಾಕರ್ ಆಯ್ಕೆ…

ಮಂಗಳುರು,ಫೆ,28,2020(www.justkannada.in):  ಮಂಗಳೂರು ಮಹಾನಗರ ಪಾಲಿಕೆ ಮೇಯರ್  ಹಾಗೂ ಉಪಮೇಯರ್ ಸ್ಥಾನಕ್ಕೆ  ಇಂದು ಚುನಾವಣೆ ನಡೆದಿದ್ದು, ಮೇಯರ್ ಆಗಿ ಬಿಜೆಪಿ ಹಿರಿಯ ಸದಸ್ಯ ದಿವಾಕರ ಆಯ್ಕೆಯಾಗಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾಗಿರುವ ಅರವತ್ತು ಕಾರ್ಪೋರೇಟರ್ ಗಳ ಪ್ರಮಾಣವಚನ ನೆರವೇರಿತು  ಬಳಿಕ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ  46ನೇ ಕಂಟೋನ್ಮೆಂಟ್ ವಾರ್ಡ್ ನ ಕಾರ್ಪೋರೇಟರ್ ದಿವಾಕರ್   21ನೇ ಅವಧಿಯ ಮೇಯರ್  ಆಗಿ ಆಯ್ಕೆಯಾದರು.

ಇನ್ನು ಬಿಜೆಪಿಯ ವೇದಾವತಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದು ಇವರು 9ನೇ ಕುಳಾಯಿ ವಾರ್ಡ್ ಕಾರ್ಪೋರೇಟರ್ ಆಗಿದ್ದಾರೆ. ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತರಾದ ವಿ. ಯಶವಂತ್ ನೇತೃತ್ವದಲ್ಲಿ ಈ ಚುನಾವಣೆ ನಡೆಯಿತು. 60 ಸದಸ್ಯಬಲದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ  44, ಕಾಂಗ್ರೆಸ್  14, ಎಸ್.ಡಿ.ಪಿ.ಐ  2 ಸದಸ್ಯರ ಬಲ ಹೊಂದಿದೆ.

Key words Mangalore city corporation-: BJP- Diwakar -elected – mayor