ಮೂರು ಆನೆಗಳ ಮೇಲೆ ಹರಿದ ಮಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ರೈಲು.

ಚೆನ್ನೈ, ನವೆಂಬರ್ 27, 2021 (www.justkannada.in): ಬಹಳ ದುಃಖಕರವಾದ ಒಂದು ಘಟನೆಯಲ್ಲಿ 25 ವರ್ಷ ವಯಸ್ಸಿನ ಒಂದು ಹೆಣ್ಣಾನೆಯ ಜೊತಗೆ ಅದರ ಎರಡು ಮರಿಗಳು ರೈಲು ಅಪಘಾತದಲ್ಲಿ ಸಾವಿಗೀಡಾಗಿರುವ ಘಟನೆ ಕೊಯಮುತ್ತೂರಿನಿಂದ ವರದಿಯಾಗಿದೆ.

ಈ ಘಟನೆ ಶುಕ್ರವಾರ ರಾತ್ರಿ ಸುಮಾರು 9 ಗಂಟೆಯ ಹೊತ್ತಿಗೆ ನಡೆದಿದೆ ಎನ್ನಲಾಗಿದೆ. ಈ ಮೂರು ಆನೆಗಳು ಕೊಯಮತ್ತೂರಿನ ಮದುಕ್ಕರೈ ಬಳಿ ರೈಲ್ವೆ ಹಳಿಯನ್ನು ದಾಟುತ್ತಿದ್ದವು. ಆ ಆನೆಗಳ ಹಿಂಡಿನಲ್ಲಿ ಒಂದು ಹೆಣ್ಣಾನೆ ಮತ್ತು ಅದರ ಎರಡು ಮರಿಗಳು ಅದೇ ಮಾರ್ಗವಾಗಿ ತೆರಳುತ್ತಿದ್ದ ಮಂಗಳೂರು-ಚೆನ್ನೈ ಎಕ್ಸ್ಪ್ರೆಸ್ ರೈಲಿನ ಗಾಲಿಗಳ ಅಡಿ ಸಿಲುಕಿ ದಾರುಣವಾಗಿ ಸಾವನನ್ನಪ್ಪಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ರೈಲು ಕರ್ನಾಟಕದ ಮಂಗಳೂರಿನಿಂದ ಕೇರಳದ ಕೋಳಿಕ್ಕೋಡ್ ಹಾಗೂ ಪಾಲಕ್ಕಾಡ್ ಮೂಲಕ ಚೆನ್ನೈಗೆ ತೆರಳುತಿತ್ತು.

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊಯಮತ್ತೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆಗಳ ಈ ರೀತಿಯ ಅಸ್ವಾಭಾವಿಕ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Mangalore-Chennai –express- train – three elephants-death