ಮಂಗಳೂರು ಏರ್ ಪೋರ್ಟ್ ನಲ್ಲಿ ಪತ್ತೆಯಾಗಿದ್ದ ಬಾಂಬ್ ಅನ್ನ ಸೇಫ್ ಆಗಿ ಸ್ಪೋಟಿಸಿದ ಸಿಬ್ಬಂದಿ…

ಮಂಗಳೂರು,ಜ,20,2020(www.justkannada.in):  ಮಂಗಳೂರು ಏರ್ ಪೋರ್ಟ್ ನಲ್ಲಿ ಬ್ಯಾಗ್ ನಲ್ಲಿ ಪತ್ತೆಯಾಗಿದ್ದ ಬಾಂಬ್ ನಿಷ್ಕ್ರಿಯಾ ಕಾರ್ಯಚರಣೆಯನ್ನ ಬಾಂಬ್ ನಿಷ್ಕ್ರಿಯಾ ದಳ ಯಶಸ್ವಿಗೊಳಿಸಿದೆ.

ಕೆಂಜಾರು ಮೈದಾನದಲ್ಲಿ ಬಾಂಬ್ ಅನ್ನ ಸಿಬ್ಬಂದಿಗಳು ಸ್ಪೋಟಿಸಿದ್ದಾರೆ. ಇದರಿಂದಾಗಿ ಮಂಗಳೂರಿನ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ. ಮಂಗಳೂರಿನ ಏರ್ ಪೋರ್ಟ್ ನ ಪ್ರಯಾಣಿಕರ ವಿಶ್ರಾಂತಿ ಸ್ಥಳದಲ್ಲಿ ಪತ್ತೆಯಾಗಿದ್ದ ಬಾಂಬ್ ಅನ್ನ ಬಾಂಬ್ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯಾ ದಳದ ಸಿಬ್ಬಂದಿ ನಗರದ ಕೆಂಜಾರು ಮೈದಾನಕ್ಕೆ ಸ್ಥಳಾಂತರಿಸಿದರು.

ಇದಕ್ಕೂ ಮೊದಲು ಬಾಂಬ್ ನಿಷ್ಕ್ರಿಯ ಯಂತ್ರವನ್ನು ಹೊತ್ತು ತಂದಿರುವ ಟ್ರ್ಯಾಕ್ಟರ್ ಅನ್ನು ಕೆಳಕ್ಕಿಳಿಸುವಾಗ ಅಡಚಣೆ ಉಂಟಾಯಿತು. ನಂತರ ಕ್ರೇನ್ ನೆರವಿನಲ್ಲಿ ಹೆದ್ದಾರಿ ಕೆಳಕ್ಕೆ ಇಳಿಸಲಾಯಿತು. ನಂತರ ನಿರ್ಜನ ಪ್ರದೇಶದಲ್ಲಿ ಬಾಂಬ್ ಅನ್ನ ಮರಳಿನ ಚೀಲದ ಮೂಟೆಯ ಮಧ್ಯದಲ್ಲಿ ಇರಿಸಿ ಬಳಿಕ ಬಾಂಬ್ ಅನ್ನ ಸ್ಪೋಟಿಸಿದ್ದಾರೆ. ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆ ಬೆಂಗಳೂರು, ಹುಬ್ಬಳ್ಳಿ, ಮೈಸೂರು ಏರ್ ಪೋರ್ಟ್ ಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Key words:   Mangalore Airport- Bomb squad -exploded -bomb-kenjaru ground