ಅಕ್ಟೋರ್‌ 21 ರಂದು ಮಂಡ್ಯ ಚುನಾವಣೆಯ ‘‘ಮತಭಿಕ್ಷೆ ಕೃತಿ ಬಿಡುಗಡೆ

ಮೈಸೂರು, ಅಕ್ಟೋಬರ್,19,2020(www.justkannada.in) : ಮಂಡ್ಯ ಲೋಕಸಭಾ ಚುನಾವಣೆ-2019ರ ವಿಶೇಷ ಘಟನೆ ಹಾಗೂ ಸ್ವಾರಸ್ಯಗಳನ್ನು ಒಳಗೊಂಡ ‘‘ಮತಭಿಕ್ಷೆ, ದಿ ಅನ್‌ಟೋಲ್ಡ್‌ ಸ್ಟೋರಿ ಎಂಬ ರಾಜಕೀಯ ಸಾಹಿತ್ಯ ಕೃತಿ ಅಕ್ಟೋಬರ್‌ 21 ರಂದು ಲೋಕಾರ್ಪಣೆಗೊಳ್ಳಲಿದೆ.jk-logo-justkannada-logo

ಇದು ಪತ್ರಕರ್ತ ಐತಿಚಂಡ ರಮೇಶ್‌ ಉತ್ತಪ್ಪ ಅವರ 25ನೇ ಕೃತಿಯಾಗಿದ್ದು, ಮೈಸೂರು ಜಿಲ್ಲಾಪತ್ರಕರ್ತರ ಸಂಘ ಹಾಗೂ ಮಾನಸ ಪ್ರಕಾಶನದ ಸಹಯೋಗದಲ್ಲಿಬಿಡಗಡೆ ಸಮಾರಂಭ ನಡೆಯಲಿದೆ.

ಅಂದು ಬೆಳಗ್ಗೆ 10.30ಕ್ಕೆ ಪತ್ರಕರ್ತರ ಭವನದಲ್ಲಿವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಅವರು ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಮೈಸೂರು ವಿವಿ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ನಿರಂಜನ ವಾನಳ್ಳಿ ಕೃತಿಯ ಕುರಿತು ಮಾತನಾಡಲಿದ್ದಾರೆ.

Mandya-polls-October 21-Release-Pilgrimage

ಮುಖ್ಯ ಅತಿಥಿಗಳಾಗಿ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನದಂದ ತಗಡೂರು, ‘ತನುಮನು ಪ್ರಕಾಶನದ ಮಾನಸ ಅವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಜಿಲ್ಲಾಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅವರು ವಹಿಸಲಿದ್ದಾರೆ.

ಲೋಕಸಭಾ ಚುನಾವಣೆಯ ಹಲವು ಅನ್‌ಟೋಲ್ಡ್‌ ಸ್ಟೋರಿಗಳಿವೆ

2019ರಲ್ಲಿ ಮಂಡ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಲವು ಅನ್‌ಟೋಲ್ಡ್‌ ಸ್ಟೋರಿಗಳಿವೆ. ಇಡೀ ರಾಷ್ಟ್ರದ ಗಮನ ಸೆಳೆದು ಮುಖ್ಯಮಂತ್ರಿಯ ಪುತ್ರನನ್ನು ಸೋಲಿಸಿದ ಈ ಚುನಾವಣೆ ಹಾಗೂ ಪಕ್ಷೇತರ ಮಹಿಳಾ ಅಭ್ಯರ್ಥಿ ಗೆದ್ದು ದಾಖಲೆ ಸೃಷ್ಟಿಸಿರುವುದು ಇತಿಹಾಸ.

ರಾಜಕೀಯ ಸಾಹಿತ್ಯದಲ್ಲಿ ಇದೊಂದು ವಿಭಿನ್ನ ಪ್ರಯತ್ನ

ಅಂದಿನ ಪ್ರಮುಖ ಘಟನೆಗಳು ಹಾಗೂ ಸಾಕಷ್ಟು ಸ್ವಾರಸ್ಯಗಳನ್ನು ದಾಖಲಿಸುವ ಪ್ರಯತ್ನ ನಡೆದಿದೆ. ರಾಜಕೀಯ ಸಾಹಿತ್ಯದಲ್ಲಿ ಇದೊಂದು ವಿಭಿನ್ನ ಪ್ರಯತ್ನವಾಗಿದ್ದು, ಒಂದು ಕ್ಷೇತ್ರದ ಚುನಾವಣೆ ಕುರಿತು ಕೃತಿ ರಚನೆಯಾಗಿರುವುದು ವಿಶೇಷವಾಗಿದೆ ಎಂದು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

key words : Mandya-polls-October 21-Release-Pilgrimage